ಹಿಂದೂ ಹೆಣ್ಮಕ್ಕಳ ತಂಟೆಗೆ ಬಂದ್ರೆ ಹುಷಾರ್, ಗೋಹಂತಕರಿಗೂ ನೆಮ್ಮದಿ ಇಲ್ಲ: ಗುಡುಗಿದ ಸಿಎಂ!
* ಅಪರಾಧ ಕೃತ್ಯ ಎಸಗುವವರ ವಿರುದ್ಧ ಗುಜರಾತ್ ಸಿಎಂ ಗುಡುಗು
* ಹಿಂದೂ ಹುಡುಗಿಯರ ತಮಟೆಗೆ ಬಂದ್ರೆ ಸುಮ್ಮನಿರಲ್ಲ
* ಗೋಹಂತಕರಿಗೂ ನೆಮ್ಮದಿ ಇಲ್ಲ
ಅಹಮದಾಬಾದ್(ಸೆ.11): ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ ಗೋ ಹತ್ಯೆ ಮಾಡುವವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುವುದಾಗಿ ಗುಡುಗಿದ್ದಾರೆ.
ಹೌದು ಗುಜರಾತ್‌ನ ಅಹಮದಾಬಾದ್ ವೈಷ್ಣೋದೇವಿ ವೃತ್ತದ ಬಳಿ ಮಾಲಧಾರಿ ಸಮುದಾಯವನ್ನುದ್ದೇಶಿಸಿ ಮಾತನಾಡಿದ ವಿಜಯ್ ರೂಪಾನಿ, ಹಿಂದೂ ಹುಡುಗಿಯನ್ನು ಪುಸಲಾಯಿಸಿ, ಲವ್ ಜಿಹಾದ್ ಬಲೆಗೆ ಬೀಳಿಸಿ ಅವರೊಂದಿಗೆ ಪರಾರಿಯಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗೋ ಹತ್ಯೆಗೂ ಖಂಡನೆ
ಇದೇ ವೇಳೆ ಗೋಹತ್ಯೆ ವಿಚಾರವಾಗಿಯೂ ವಾರ್ನ್ ಮಾಡಿರುವ ರೂಪಾನಿ 'ಗೋಮಾತೆಯ ವಧೆ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರ ಅಪರಾಧ ಕೃತ್ಯ ತಡೆಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಗೋಹತ್ಯೆ ತಡೆಯಿಂದ ಸರಗಳ್ಳತನ ನಿಯಂತ್ರಣದವರೆಗೆ ಹಲವು ಕಾನೂನು ಅನುಷ್ಠಾನಗೊಳಿಸಿದೆ ಎಂದಿದ್ದಾರೆ.
ಲವ್ ಜಿಹಾದ್ ಬಗ್ಗೆಯೂ ಕಿಡಿ
ಲವ್ ಜಿಹಾದ್ ವಿಚಾರ ಉಲ್ಲೇಖಿಸಿದ ಸಿಎಂ ರೂಪಾನಿ ಲವ್ ಜಿಹಾದ್ ವಿರುದ್ಧ ಕೂಡ ಕಠಿಣ ನಿಯಮ ಸರ್ಕಾರ ತಂದಿದೆ. ಲವ್ ಜಿಹಾದ್ ನಿಲ್ಲಿಸಲು ಕಾನೂನು ತಂದಿದ್ದು, ಹಿಂದೂ ಹುಡುಗಿಯನ್ನು ಬಲೆಗೆ ಬೀಳಿಸುವ ಹಾಗೂ ಅವರೊಂದಿಗೆ ಓಡಿಹೋಗುವವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದಿದ್ದಾರೆ.
ಗುಜರಾತ್ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ವಿಧಾನಸಭೆಯಲ್ಲಿ ಅಂಗೀಕಾರ
ಅಲ್ಲದೇ ಗುಜರಾತ್ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ 2021ನ್ನು ಏಪ್ರಿಲ್ ತಿಂಗಳಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಹಾಗೇ, ಜೂನ್ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದರ ಅನ್ವಯ ಮದುವೆ ಅಥವಾ ಇನ್ಯಾವುದೇ ವಿಧಾನದ ಮೂಲಕ ಬಲವಂತದ ಮತಾಂತರ ಕ್ರಿಯೆ ನಡೆಸಿದರೆ, ಕಠಿಣ ಶಿಕ್ಷೆಯಿದೆ ಆದರೆ ಈ ಕಾನೂನಿನಲ್ಲಿರುವ ಕೆಲವು ವಿವಾದಾತ್ಮಕ ಅಂಶಗಳಿಗೆ ಕಳೆದ ತಿಂಗಳು ಗುಜರಾತ್ ಹೈಕೋರ್ಟ್ ತಡೆ ನೀಡಿದೆ ಎಂಬುವುದು ಉಲ್ಲೇಖನೀಯ.