ಬಿಗ್3 ಡೆಡ್‌ಲೈನ್‌ಗೆ ಮಣಿದ ಶಾಸಕ ಅನಿಲ್ ಚಿಕ್ಕಮಾದು, ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ
ಕೊಳೆಯುತ್ತಿದೆ ಕೊರೋನಾ ಕಿಟ್ ಸುವರ್ಣ ನ್ಯೂಸ್ ಬಿಗ್ 3 ವರದಿಗೆ ಶಾಸಕರು, ಅಧಿಕಾರಿಗಳು ಸ್ಪಂದಿಸಿದ್ದು, ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿದ್ದಾರೆ.
ಮೈಸೂರು (ಮೇ.06): 4 ನೇ ಅಲೆ ತಡೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದ್ರೆ ಮೈಸೂರಿನಲ್ಲಿ (Mysuru) ಅಧಿಕಾರಿಗಳು ಕೊರೋನಾ (Corona) ಸಮಯದಲ್ಲಿ ಜನರಿಗೆ ನೀಡಬೇಕಗಿದ್ದ ಕಿಟ್‌ಗಳನ್ನು (Kit) ಗೋಡೌನ್‌ನಲ್ಲಿ ಇಟ್ಟು ಕೊಳೆಸುತ್ತಿದ್ದಾರೆ. ಎಚ್ ಡಿ ಕೋಟೆಯ ಗೋಡೌನ್‌ನಲ್ಲಿ ಮುಚ್ಚಿಟ್ಟು 500 ಕಿಟ್‌ಗಳನ್ನು ಕೊಳೆಸುತ್ತಿದ್ದಾರೆ. ಇಲ್ಲಿರುವ ಕಿಟ್‌ಗಳೆಲ್ಲಾ ಯಡಿಯೂರಪ್ಪ ಸಿಎಂ ಆಗಿದ್ದಾಗ, ಶಿವರಾಮ್ ಹೆಬ್ಬಾರ್ ಕಾರ್ಮಿಕ ಸಚಿವರಾಗಿದ್ದಾಗ ನೀಡಿದ ಕಿಟ್‌ಗಳು. ಈ ಕಿಟ್‌ಗಳು ಫಲಾನುಭವಿಗಳ ಕೈ ಸೇರದೇ ಕೊಳೆತು ಹೋಗಿವೆ. ಇಲ್ಲಿರುವ ಕಿಟ್‌ಗಳನ್ನು ಫಲಾನುಭವಿಗಳಿಗೆ ಕೊಡಲು ಶಾಸಕ ಅನಿಲ್ ಚಿಕ್ಕಮಾದು ಡೇಟ್ ಕೊಡ್ತಿಲ್ವ ಎಂದು ಸುವರ್ಣ ನ್ಯೂಸ್ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಶಾಸಕರು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿತ್ತು. ಕಿಟ್ ನೀಡಲು ಗಡುವು ವಿಧಿಸಿತ್ತು. ಅದರಂತೆ ಶಾಸಕ ಅನಿಲ್ ಚಿಕ್ಕಮಾದು, ಕಾರ್ಮಿಕರಿಗೆ ಕಿಟ್ ವಿತರಿಸಿದ್ದಾರೆ.
Big 3 Impact:ಮೇ 5 ರೊಳಗೆ ಕೊರೊನಾ ಕಿಟ್ ಹಂಚಲು ಶಾಸಕ ಅನಿಲ್ ಚಿಕ್ಕಮಾದು ಸೂಚನೆ