Big3 Impact:ವೃದ್ಧ ಸಹೋದರಿಯರಿಗೆ ಸಿಕ್ತು ಸೂರು, ಹೊಸ ಮನೆ ನೋಡಿ ಭಾವುಕರಾದ ಅಜ್ಜಿಯರು!

ಬಾಗಲಕೋಟೆ (Bagalkot) ಹುನಗುಂದ (Hunagunda)  ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಾಬವ್ವ ಮತ್ತು ಗಂಗವ್ವ ಎನ್ನು ವೃದ್ಧ ಸಹೋದರಿಯರು ಸೂರಿಲ್ಲದೇ ಪರದಾಡುತ್ತಿದ್ದರು. ಮನೆ ಕಟ್ಟಿಕೊಳ್ಳೋಕೆ ಹಣ ಇಲ್ಲದೇ ಅಸಹಾಯಕರಾಗಿದ್ದರು. ಹೀಗಿರುವಾಗ ಆ ವೃದ್ಧ ಸಹೋದರಿಯರ ಜೊತೆ ಅಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಿಂತಿತ್ತು. 

First Published May 9, 2022, 2:25 PM IST | Last Updated May 9, 2022, 2:41 PM IST

ಬಾಗಲಕೋಟೆ (ಮೇ. 09): ಹುನಗುಂದ (Hunagunda) ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಾಬವ್ವ ಮತ್ತು ಗಂಗವ್ವ ಎನ್ನು ವೃದ್ಧ ಸಹೋದರಿಯರು ಸೂರಿಲ್ಲದೇ ಪರದಾಡುತ್ತಿದ್ದರು. ಮನೆ ಕಟ್ಟಿಕೊಳ್ಳೋಕೆ ಹಣ ಇಲ್ಲದೇ ಅಸಹಾಯಕರಾಗಿದ್ದರು. ಹೀಗಿರುವಾಗ ಆ ವೃದ್ಧ ಸಹೋದರಿಯರ ಜೊತೆ ಅಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಿಂತಿತ್ತು. ವರದಿ ಪ್ರಸಾರ ಮಾಡಿತ್ತು.

ಬಿಗ್ 3 ಸಾರ್ಥಕತೆ, ಅಜ್ಜಿಯರಿಗೆ ಸಿಕ್ತು ಸೂರು, ಇದರ ಹಿಂದಿರುವವರು ಇವರು!

ಕೂಡಲೇ ಸ್ಥಳೀಯ ಪುರಸಭೆ ಅಧಿಕಾರಗಳು ದೌಡಾಯಿಸಿ ತಾತ್ಕಾಲಿಕವಾಗಿ ಇರುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಮನೆ ಕಟ್ಟಿಕೊಡುವ ಭರವಸೆ ನೀಡಿದರು. ಅದರಂತೆ ಪುರಸಭೆ ಅಧ್ಯಕ್ಷ ಶರಣು ಬೆಲ್ಲದ್ ನೇತೃತ್ವದಲ್ಲಿ ಅಜ್ಜಿಯರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಯಿತು. ಆಸ್ಪತ್ರೆಯಿಂದ ಬಂದ ಅಜ್ಜಿಯರು ನೂತನ ಮನೆ ನೋಡಿ ಭಾವುಕರಾದರು. ಪುರಸಭೆ ಸಿಬ್ಬಂದಿಗಳಿಗೆ ಅಜ್ಜಿಯರು ಕೈ ಮುಗಿದು, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದರು.