ಬಿಗ್ 3 ಸಾರ್ಥಕತೆ, ಅಜ್ಜಿಯರಿಗೆ ಸಿಕ್ತು ಸೂರು, ಇದರ ಹಿಂದಿರುವವರು ಇವರು..!
ಹುನಗುಂದ (Hunagunda) ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಾಬವ್ವ ಮತ್ತು ಗಂಗವ್ವ ಎನ್ನು ವೃದ್ಧ ಸಹೋದರಿಯರು ಸೂರಿಲ್ಲದೇ ಪರದಾಡುತ್ತಿದ್ದರು. ಭಾರೀ ಮಳೆಯಿಂದಾಗಿ (Flood) ಇರುವ ಮನೆಯೂ ಕುಸಿದು ಬಿದ್ದು, ಶೆಡ್‌ನಲ್ಲಿ ಪರದಾಡುತ್ತಿದ್ದರು. ಕುಟುಂಬಸ್ಥರು, ನೋಡಿಕೊಳ್ಳುವವರಿಲ್ಲ, ಮನೆ ಕಟ್ಟಿಕೊಳ್ಳೋಕೆ ಹಣ ಇಲ್ಲದೇ ಅಸಹಾಯಕರಾಗಿದ್ದರು.
ಬಾಗಲಕೋಟೆ (ಮೇ. 09): ಹುನಗುಂದ (Hunagunda) ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಸಾಬವ್ವ ಮತ್ತು ಗಂಗವ್ವ ಎನ್ನು ವೃದ್ಧ ಸಹೋದರಿಯರು ಸೂರಿಲ್ಲದೇ ಪರದಾಡುತ್ತಿದ್ದರು. ಭಾರೀ ಮಳೆಯಿಂದಾಗಿ (Flood) ಇರುವ ಮನೆಯೂ ಕುಸಿದು ಬಿದ್ದು, ಶೆಡ್‌ನಲ್ಲಿ ಪರದಾಡುತ್ತಿದ್ದರು. ಕುಟುಂಬಸ್ಥರು, ನೋಡಿಕೊಳ್ಳುವವರಿಲ್ಲ, ಮನೆ ಕಟ್ಟಿಕೊಳ್ಳೋಕೆ ಹಣ ಇಲ್ಲದೇ ಅಸಹಾಯಕರಾಗಿದ್ದರು. ಇವರ ಕಷ್ಟವನ್ನು ಗುರುತಿಸಿ ಆ ಆ ವೃದ್ಧ ಸಹೋದರಿಯರ ಜೊತೆ ಅಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಿಂತಿತ್ತು. ಬಿಗ್ 3 (Big 3) ವರದಿ ಪ್ರಸಾರ ಮಾಡಿತ್ತು.
Big 3 Impact:ವೃದ್ಧ ಸಹೋದರಿಯರಿಗೆ ಸಿಕ್ತು ಸೂರಿ, ಹೊಸ ಮನೆ ನೋಡಿ ಭಾವುಕರಾದ ಅಜ್ಜಿಯರು!
ಕೂಡಲೇ ಸ್ಥಳೀಯ ಪುರಸಭೆ ಅಧಿಕಾರಗಳು ದೌಡಾಯಿಸಿ ತಾತ್ಕಾಲಿಕವಾಗಿ ಇರುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಮನೆ ಕಟ್ಟಿಕೊಡುವ ಭರವಸೆ ನೀಡಿದರು. ಅಜ್ಜಿಯರಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಇರುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಪುರಸಭೆ ಅಧ್ಯಕ್ಷ ಶರಣು ಬೆಲ್ಲದ್ ನೇತೃತ್ವದಲ್ಲಿ ಅಜ್ಜಿಯರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಯಿತು. ಆಸ್ಪತ್ರೆಯಿಂದ ಬಂದ ಅಜ್ಜಿಯರು ನೂತನ ಮನೆ ನೋಡಿ ಭಾವುಕರಾದರು. ಪುರಸಭೆ ಸಿಬ್ಬಂದಿಗಳಿಗೆ ಅಜ್ಜಿಯರು ಕೈ ಮುಗಿದು, ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದರು. ಬಿಗ್3 ಯ ಈ ಸಾರ್ಥಕ ಕೆಲಸದ ಹಿಂದೆ ಹತ್ತಾರು ಕೈಗಳಿವೆ. ಅವರೆಲ್ಲರಿಗೂ ವಿಶೇಷ ಧನ್ಯವಾದಗಳು..!