Asianet Suvarna News Asianet Suvarna News

ನೆರೆ ಪೀಡಿತ ಮಕ್ಕಳ ಶಿಕ್ಷಣ; BIG 3 ಅಭಿಯಾನಕ್ಕೆ ಕನ್ನಡಿಗರ ಪಣ!

‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ. ಶಾಲಾ ಮಕ್ಕಳಿಗಾಗಿಯೇ ಸುವರ್ಣನ್ಯೂಸ್ ಅಭಿಯಾನವೊಂದನ್ನು ಆರಂಭಿಸಿದೆ.  

ಬೆಂಗಳೂರು (ಅ.17): ‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ. 

ತಮ್ಮ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಮಕ್ಕಳ ಮುಂದೆ ಕತ್ತಲು ಆವರಿಸಿದೆ. ಅವರ ಪುಸ್ತಕಗಳು, ಬ್ಯಾಗ್‌ಗಳು, ಶೈಕ್ಷಣಿಕ ಪರಿಕರಗಳು... ಹೀಗೆ ಎಲ್ಲವೂ ನೆರೆ ಪಾಲಾಗಿದೆ. ಮೊದಲೇ, ಮನೆ-ಮಠ, ಗದ್ದೆ-ಬೆಳೆ ಕಳೆದುಕೊಂಡ ಪೋಷಕರಿಗೆ ಇದಕ್ಕೆ ಹಣ ಹೊಂದಿಸುವ ಚಿಂತೆ.  

ಸುವರ್ಣನ್ಯೂಸ್ ಹೊಸ ಅಭಿಯಾನ ಆರಂಭಿಸಿದ ಬೆನ್ನಲ್ಲೇ, ಕನ್ನಡ ನಾಡಿನ ಸಹೃದಯರು ಮನವಿಗೆ ಸ್ಪಂದಿಸಲು ಶುರು ಮಾಡಿದ್ದಾರೆ.