ಶಾಲಾ ಮಕ್ಕಳಿಗಾಗಿ ಮಿಡಿಯಲಿ ಮನ; ನೆರೆ ಪೀಡಿತರಿಗಾಗಿ BIG 3 ಹೊಸ ಅಭಿಯಾನ

ಉತ್ತರ ಕರ್ನಾಟಕದಲ್ಲಿ ಈ ಹಿಂದೆ ಕಂಡು ಕೇಳರಿಯದಂತಹ ನೆರೆ ಬಂತು, ಜನಜೀವನ ಅಸ್ತವ್ಯಸ್ತವಾಯ್ತು, ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡ್ರು. ಪ್ರಕೃತಿ ವಿಕೋಪದ ವೇಳೆ  ಕನ್ನಡನಾಡಿನ ಜನತೆ ಸಾಧ್ಯವಾದಷ್ಟು ಪ್ರವಾಹ ಪೀಡಿತರಿಗೆ ನೆರವು ನೀಡಿದರು. ಸುವರ್ಣನ್ಯೂಸ್ ಅದಕ್ಕಾಗಿಯೇ ಸಮರೋಪಾದಿಯಲ್ಲಿ ಕೆಲಸ ಮಾಡಿತ್ತು. ಪ್ರವಾಹ ಸಂತ್ರಸ್ತರು ಮತ್ತು ನೆರವು ನೀಡುವವರ ನಡುವೆ ಸೇತುವೆಯಾಗಿ ಕೆಲಸ ಮಾಡಿತ್ತು. ಅಲ್ಲಿಗೆ ಸಮಸ್ಯೆ ಮುಗಿದಿಲ್ಲ...ಬಹಳಷ್ಟು ಕೆಲಸ ಬಾಕಿ ಇದೆ... 

Share this Video
  • FB
  • Linkdin
  • Whatsapp

ಉತ್ತರ ಕರ್ನಾಟಕದಲ್ಲಿ ಈ ಹಿಂದೆ ಕಂಡು ಕೇಳರಿಯದಂತಹ ನೆರೆ ಬಂತು, ಜನಜೀವನ ಅಸ್ತವ್ಯಸ್ತವಾಯ್ತು, ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡ್ರು. ಪ್ರಕೃತಿ ವಿಕೋಪದ ವೇಳೆ ಕನ್ನಡನಾಡಿನ ಜನತೆ ಸಾಧ್ಯವಾದಷ್ಟು ಪ್ರವಾಹ ಪೀಡಿತರಿಗೆ ನೆರವು ನೀಡಿದರು. ಸುವರ್ಣನ್ಯೂಸ್ ಅದಕ್ಕಾಗಿಯೇ ಸಮರೋಪಾದಿಯಲ್ಲಿ ಕೆಲಸ ಮಾಡಿತ್ತು. ಪ್ರವಾಹ ಸಂತ್ರಸ್ತರು ಮತ್ತು ನೆರವು ನೀಡುವವರ ನಡುವೆ ಸೇತುವೆಯಾಗಿ ಕೆಲಸ ಮಾಡಿತ್ತು.

ನೆರೆ ಇಳಿಯಿತು, ಪರಿಹಾರ ಕೇಂದ್ರಗಳಿಂದ ಜನ ತಮ್ಮ ತಮ್ಮ ಊರುಗಳಿಗೆ ವಾಪಾಸಾದರು. ಮುಂದೇನು? ಬೆಳೆ ಹಾಳಾಗಿದೆ, ಮನೆ ಕುಸಿದು ಬಿದ್ದಿದೆ, ಸರ್ಕಾರದ ನೆರೆ-ಪರಿಹಾರದ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ, ತೀರಾ ನಿರ್ಲಕ್ಷ್ಯಕ್ಕೊಳಗಾದ ಇನ್ನೊಂದು ವರ್ಗ ಇದೆ. ಅದು ಶಾಲಾ ವಿದ್ಯಾರ್ಥಿಗಳದ್ದು. ಮನೆ ಹಿರಿಯರ ಚಿಂತೆ ಒಂದು ಕಡೆ, ಮನೆ ಮಕ್ಕಳ ವ್ಯಥೆ ಇನ್ನೊಂದು ಕಡೆ. ನೆರೆಯಲ್ಲಿ ಅವರ ಭವಿಷ್ಯವೇ ಕೊಚ್ಚಿ ಹೋದ ಪರಿಸ್ಥಿತಿ. ಅವರ ಪುಸ್ತಕಗಳು, ಬ್ಯಾಗ್‌ಗಳು, ಶೈಕ್ಷಣಿಕ ಪರಿಕರಗಳು... ಹೀಗೆ ಎಲ್ಲವೂ ನೆರೆ ಪಾಲಾಗಿದೆ. ಮೊದಲೇ, ತಲೆ ಮೇಲೆ ಕೈಹೊತ್ತು ಕುಳಿತಿರುವ ಪೋಷಕರು, ಇದಕ್ಕೆಲ್ಲಿಂದ ಹಣ ಹೊಂದಿಸೋದು? ಸುವರ್ಣನ್ಯೂಸ್ ಹೊಸ ಅಭಿಯಾನದ ಬಗ್ಗೆ ಕರೆಂಟ್- ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಬೆಳಕು ಚೆಲ್ಲಿದ್ದಾರೆ. ಬನ್ನಿ, ನೋಡೋಣ...ಕೈ ಜೋಡಿಸೋಣ...

Related Video