ಭೂತಕೋಲ ಹಾಗೂ ಹಿಂದೂ ದೈವಾರಾಧನೆ ಪ್ರಶ್ನಿಸಿದ ನಟ ಚೇತನ್ ವಿರುದ್ಧ ಹೆಚ್ಚಾಯ್ತು ಆಕ್ರೋಶ!
ನಟ ಚೇತನ್ ಹೇಳಿಕೆಯಿಂದ ಭುಗಿಲೆದ್ದ ಆಕ್ರೋಶ, ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ, ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ, ಮೈತ್ರಿ ಸರ್ಕಾರ ಬಂದರೆ ಸಿಎಂ ಆಗಲ್ಲ ಎಂದು ಕುಮಾರಸ್ವಾಮಿ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಭೂತಕೋಲ ಹಿಂದೂ ಸಂಸ್ಕೃೃತಿಯಲ್ಲ ಎಂದು ನಟ ಚೇತನ್ ಕಾಂತಾರ ಚಿತ್ರದ ಕುರಿತು ಅಪಸ್ವರ ಎತ್ತಿದ್ದಾರೆ. ಚೇತನ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇಡೀ ಕಾಂತಾರ ಚಿತ್ರ ತಂಡ ಚೇತನ್ ವಿರುದ್ಧ ಮುಗಿಬಿದ್ದಿದೆ. ಇಷ್ಟೇ ಅಲ್ಲ ದಕ್ಷಿಣ ಕನ್ನಡದ ಹಲವು ನಾಯಕರು ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಭೂತಕೋಲ, ದೈವಾರಾಧನೆಯನ್ನು ಮಾಡಿಕೊಂಡು, ನಂಬಿಕೊಂಡು ಬರುತ್ತಿರುವ ಹಿಂದೂ ಕುಟುಂಬಕ್ಕೆ ಧಕ್ಕೆ ತಂದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಚೇತನ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ. ಇತ್ತ ರಾಜ್ಯದಲ್ಲಿ ಬಿಜೆಪಿ ಚುನಾವಣಾ ರಣಕಹಳೆ ಜೋರಾಗಿದ್ದರೆ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.