
ಮೋದಿ ಅಭಿಮಾನಿಯಾಗಿ ತಾಕತ್ತು ತೋರಿಸಿದ್ದೇವೆ: ಟಿಕಾಯತ್ ಮೇಲೆ ಹಲ್ಲೆ ಸಮರ್ಥಿಸಿದ ಭರತ್ ಶೆಟ್ಟಿ
ರೈತ ನಾಯಕ ರಾಕೇಶ್ ಟಿಕಾಯತ್‌ಗೆ ಮಸಿ ಬಳಿದು, ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಗಾಂಧಿಭವನದಲ್ಲಿ ಆಯೋಜಿಸಿದ್ದ ರೈತ ಚಳವಳಿ ಆತ್ಮಾವಲೋಕನ ಸ್ಪಷ್ಟೀಕರಣ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮಾತನಾಡುತ್ತಿದ್ದಾಗ ನಡೆದ ಘಟನೆ ಇದು.
ಬೆಂಗಳೂರು (ಮೇ. 30): ರೈತ ನಾಯಕ ರಾಕೇಶ್ ಟಿಕಾಯತ್‌ಗೆ (Rakesh Tikait) ಮಸಿ ಬಳಿದು, ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಗಾಂಧಿಭವನದಲ್ಲಿ ಆಯೋಜಿಸಿದ್ದ ರೈತ ಚಳವಳಿ ಆತ್ಮಾವಲೋಕನ ಸ್ಪಷ್ಟೀಕರಣ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮಾತನಾಡುತ್ತಿದ್ದಾಗ ನಡೆದ ಘಟನೆ ಇದು. ಘಟನೆ ಸಂಬಂಧ ಭಾರತ ರಕ್ಷಣಾ ವೇದಿಕೆ ಅಧ್ಯಕ್ಷ ಭರತ್ ಶೆಟ್ಟಿ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ. ' ಮೋದಿ ಅಭಿಮಾನಿಯಾಗಿ ಕನ್ನಡಿಗರ ತಾಕತ್ತು ತೋರಿಸಿದ್ದೇವೆ' ಎಂದು ಭರತ್ ಶೆಟ್ಟಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಕೇಶ್ ಟಿಕಾಯತ್‌ಗೆ ಮಸಿ, ಹಲ್ಲೆ: ಭಾರತ ರಕ್ಷಣಾ ವೇದಿಕೆ ಅಧ್ಯಕ್ಷ ಅರೆಸ್ಟ್