News Hour: ಸಿದ್ದು ಬಣದ ವಿರುದ್ಧ ಮತ್ತೆ ಸಿಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಇದರ ನಡುವೆ ರಾಜ್ಯ ಕಾಂಗ್ರೆಸ್‌ ಈ ಯಾತ್ರೆಯ ಸ್ವಾಗತಕ್ಕೆ ಸಿದ್ಧತೆ ಆರಂಭಿಸಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಮಾತ್ರ ತಾವು ಅಂದುಕೊಂಡ ವೇಗದಲ್ಲಿ ಕೆಲಸ ಸಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 17): ಭಾರತ್‌ ಜೋಡೋ ಯಾತ್ರೆಯೊಂದಿಗೆ ರಾಜ್ಯ ಕಾಂಗ್ರೆಸ್‌ನ ಅಂತರ್ಯುದ್ಧ ಮತ್ತೊಮ್ಮೆ ಬಹಿರಂಗವಾಗಿದೆ. ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬಣದ ಶಾಸಕರ ನಡುವೆ ಫೈಟ್‌ ಆರಂಭವಾಗಿರುವ ಸೂಚನೆ ಸಿಕ್ಕಿದೆ. ಭಾರತ್‌ ಜೋಡೋ ಯಾತ್ರೆಯ ಸಿದ್ಧತೆಗೆ ಕೆಪಿಸಿಸಿ ಅಧ್ಯಕ್ಷರಿಗೆ ಸಿದ್ಧು ಬಣದ ಶಾಸಕರು ಬೆಂಬಲ ನೀಡುತ್ತಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿರುವ ಕಾರಣಕ್ಕೆ, ಡಿಕೆಶಿ ಪದೇ ಪದೇ ಟಿಕೆಟ್‌ ಅಸ್ತ್ರ ಬಳಕೆ ಮಾಡುತ್ತಿದ್ದಾರೆ.

ಕೆಲಸ ಮಾಡದ ಶಾಸಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ ನೀಡಿರುವ ಡಿಕೆ ಶಿವಕುಮಾರ್, ಕೆಲಸ ಮಾಡದೇ ಇದ್ದರೆ ಯಾಕೆ ಟಿಕೆಟ್‌ ಕೊಡಬೇಕು. ನನಗೆ ನಂಬರ್‌ ಬೇಕು ನಮ್ಮ ಸರ್ಕಾರ ಬರಬೇಕು. ಕ್ಷೇತ್ರದಲ್ಲಿ ಮದುವೆ ಅಟೆಂಡ್‌ ಮಾಡ್ಕೊಂಡು ಇದ್ರೆ ಆಗೋದಿಲ್ಲ. ಬೂತ್‌ ಮಟ್ಟಕ್ಕೆ ಹೋಗಿ ಎಲ್ಲಾ ಕೆಲಸ ಮಾಡಬೇಕು. ಹಾಗಿದ್ದಾಗ ಮಾತ್ರವೇ ಪಕ್ಷ ಸಂಘಟನೆ ಸಾಧ್ಯ ಎಂದು ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಡಿಕೆಶಿಗೆ ಇ.ಡಿ ಸಮನ್ಸ್‌; ಭಾರತ ಏಕತಾ ಯಾತ್ರೆ, ಅಧಿವೇಶನದ ವೇಳೆ ಕಿರುಕುಳ ಎಂದ ಕಾಂಗ್ರೆಸ್‌ ಅಧ್ಯಕ್ಷ

ಇನ್ನು ಕೆಪಿಸಿಸಿ ಜನರಲ್‌ ಸೆಕ್ರೆಟರಿ ವಿರುದ್ಧವೂ ಡಿಕೆಶಿ ಸಿಟ್ಟು ಹೊರಹಾಕಿದ್ದಾರೆ. ಎಲ್ಲವೂ ನನ್ನೊಬ್ಬನಿಂದಲೇ ಮಾಡಲು ಸಾಧ್ಯವಿಲ್ಲ. ಉಪಾಧ್ಯಕ್ಷರು, ಜನರಲ್ ಸೆಕ್ರೆಟರಿ ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ಈ ನಡುವೆ ಸಿದ್ಧರಾಮಯ್ಯ ಯಾತ್ರೆಗೆ ಸಹಕಾರ ಕೊಡುತ್ತಿಲ್ಲ ಎನ್ನುವ ಬಗ್ಗೆ ತಮಗೆ ಗೊತ್ತಿಲ್ಲ. ಯಾರು ಸಹಕಾರ ಕೊಡುತ್ತಿಲ್ಲ ಎಂದು ಡಿಕೆಶಿ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.

Related Video