ಬೆಂಗಳೂರಿನ ಜನರಿಗೆ ಇಂದು ಟ್ರಾಫಿಕ್ ಬಿಸಿ; ವಾಹನ ಸವಾರರೇ ಈ ಮಾರ್ಗಗಳಲ್ಲಿ ಹೋಗಬೇಡಿ

ಭಾರತ್ ಬಂದ್ ನಿನ್ನೆಯೇ ಮುಗಿದಿದ್ದರೂ, ಇಂದು ರಾಜ್ಯ ರಾಜಧಾನಿಯಲ್ಲಿ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. 4 ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದ್ದು ಸಹಜವಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. 

First Published Dec 9, 2020, 10:06 AM IST | Last Updated Dec 9, 2020, 10:44 AM IST

ಬೆಂಗಳೂರು (ಡಿ. 09): ಭಾರತ್ ಬಂದ್ ನಿನ್ನೆಯೇ ಮುಗಿದಿದ್ದರೂ, ಇಂದು ರಾಜ್ಯ ರಾಜಧಾನಿಯಲ್ಲಿ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. 4 ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದ್ದು ಸಹಜವಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ.

ಬೆಂಗಳೂರಿನಲ್ಲಿ ಇಂದೂ ಪ್ರತಿಭಟನೆ: ಕರವೇ ಖಾರ್ಯಕರ್ತರಿಂದ ರಾಜಭವನಕ್ಕೆ ಮುತ್ತಿಗೆ

ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಕ್ ಜಾಮ್ ಉಂಟಾಗಲಿದೆ. ರೈಲ್ವೇ ನಿಲ್ದಾಣದಿಂದ 11 ಗಂಟೆಗೆ ರೈತರ ಮೆರವಣಿಗೆ ಸಾಗುವುದು. ಈ ಮಾರ್ಗದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಲಿದೆ. ಹಾಗಾದರೆ ಮೆರವಣಿಗೆ ಹೇಗೆ ಸಾಗುವುದು? ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ? ನೋಡ್ಕೊಂಡು ಬನ್ನಿ..!