Peenya Flyover: ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪುತ್ತಿಲ್ಲ. ಪೀಣ್ಯ ಫ್ಲೈ ಓವರ್ ದುರಸ್ತಿ ಪೂರ್ಣಗೊಂಡಿದ್ದರೂ, ಸಾರ್ವಜನಿಕ ಬಳಕೆಗೆ ಅವಕಾಶ ಕೊಡುತ್ತಿಲ್ಲ. ಕಳೆದ 1 ತಿಂಗಳಿಂದ ಬಂದ್ ಆಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು (ಫೆ. 04): ಬೆಂಗಳೂರು-ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪುತ್ತಿಲ್ಲ. ಪೀಣ್ಯ ಫ್ಲೈ ಓವರ್ ದುರಸ್ತಿ ಪೂರ್ಣಗೊಂಡಿದ್ದರೂ, ಸಾರ್ವಜನಿಕ ಬಳಕೆಗೆ ಅವಕಾಶ ಕೊಡುತ್ತಿಲ್ಲ. ಕಳೆದ 1 ತಿಂಗಳಿಂದ ಬಂದ್ ಆಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಪೀಣ್ಯ- ದಾಸರಹಳ್ಳಿ ಫ್ಲೈ ಓವರ್‌ನ 102, 103 ನೇ ಪಿಲ್ಲರ್ ನಡುವೆ ಸಮಸ್ಯೆ ಕಂಡು ಬಂದಿತ್ತು. ಹೀಗಾಗಿ ಡಿ. 25 ರಿಂದ ಫ್ಲೈಓವರ್ ಬಂದ್ ಮಾಡಲಾಗಿತ್ತು. ಈಗ ಕಾಮಗಾರಿ ಮುಗಿದಿದೆ. ಆದರೂ ಬಂದ್ ಮಾಡಿದ್ಯಾಕೆ..? ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.