ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ ಸಂಸದ ಸೂರ್ಯ! ಯಾರೀ ಚೆಲುವೆ? ಯಾವಾಗ ಮದುವೆ?
ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಮೋದಿಯವರಿಂದ ಪ್ರಶಂಸೆ ಪಡೆದಿರುವ ಶಿವಶ್ರೀ ಸ್ಕಂದ ಪ್ರಸಾದ್, ಸದ್ಯದಲ್ಲೇ ಕರ್ನಾಟಕದ ಸೊಸೆಯಾಗಲಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಬಾಳಲ್ಲಿ ಹೊಸ ಬೆಳಕು.. ಯಾರೀ ಸುಂದರಿ..? ಸೂರ್ಯನ ಹೃದಯ ಕದ್ದ ಆ ಚೆಲುವೆ ಯಾರು.? ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ ಕರ್ನಾಟಕದ ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಎಂಪಿ.. ಆಕೆಯದ್ದು ಮುದ್ದು ಮುಖ..ಸುಮಧುರ ಕಂಠ.. ಮೋದಿಯೇ ಹಾಡಿ ಹೊಗಳಿದ ಗಾಯಕಿ.. ಸೂರ್ಯನ ಮನದನ್ನೆಗೆ ಸಂಗೀತವೇ ಉಸಿರು.. ತೇಜಸ್ವಿ ಜೀವನ ರಾಗಕ್ಕೆ ಜೊತೆಯಾದ ಮಧುರ ದನಿ..ಹಾಗಿದ್ರೆ, ಮದುವೆ ಯಾವಾಗ..?
ತೇಜಸ್ವಿ ಸೂರ್ಯ ಅವರ ಕೈ ಹಿಡಿಯಲಿರೋ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನ ಈ ಹಿಂದೆ ನರೇಂದ್ರ ಮೋದಿಯವರು ಒಂದ್ಸಾರಿ ಹಾಡಿ ಹೊಗಳಿದ್ದರು. ಹಾಗಿದ್ರೆ ಮೋದಿ ಮೆಚ್ಚುಗೆಗೆ ಇವರು ಪಾತ್ರರಾಗಿದ್ದು ತಮ್ಮ ಸುಧುರ ಗಾಯನದ ವಿಚಾರಕ್ಕಾಗಿ. ಇದೀಗ ಅದೇ ಶಿವಶ್ರೀ ಸ್ಕಂದ ಕರ್ನಾಟಕದ ಸೊಸೆ ಆಗಲಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಜೊತೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮೂಲಕ ಮದುವೆ ಯಾವಾಗ..? ಮದುವೆ ಯಾವಾಗ..? ಅನ್ನೋ ಪ್ರಶ್ನೆಗೆ ಉತ್ತರ ಕೊಡಲು ಮುಂದಾಗಿದ್ದಾರೆ. ಹಾಗಿದ್ರೆ ಮದುವೆ ಯಾವಾಗ..? ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿವೆ. ಆದರೆ, ಮದುವೆ ಎಷ್ಟು ಅದ್ಧೂರಿಯಾಗಿ ನಡೆಯುತ್ತದೆ ಎಂಬುದನ್ನು ನಾವು ನೀವೆಲ್ಲರೂ ಕಾದು ನೋಡಬೇಕಿದೆ.