
ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರು; ಗುಡುಗು ಸಹಿತ ಧಾರಾಕಾರ ಮಳೆ
ಸಿಲಿಕಾನ್ ಸಿಟಿಯಲ್ಲಿ ವರುಣರ ಅಬ್ಬರ ಜೋರಾಗಿದೆ. ಇಂದು ಬೆಳಗಿನ ಜಾವ 4 ಗಂಟೆಯಿಂದ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಮಲ್ಲೇಶ್ವರಂ, ಯಶವಂತಪುರ, ನವರಂಗ್, ಮೆಜೆಸ್ಟಿಕ್, ವಿಜಯ ನಗರ, ಚಾಮರಾಜಪೇಟೆ, ಗಿರಿನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಸಿಲಿನ ಝಳದಿಂದ ಕಂಗಾಲಾಗಿದ್ದ ಧರೆಗೆ ವರುಣರಾಯ ತಂಪೆರದಿದ್ದಾನೆ.
ಬೆಂಗಳೂರು (ಏ. 29): ಸಿಲಿಕಾನ್ ಸಿಟಿಯಲ್ಲಿ ವರುಣರ ಅಬ್ಬರ ಜೋರಾಗಿದೆ. ಇಂದು ಬೆಳಗಿನ ಜಾವ 4 ಗಂಟೆಯಿಂದ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಮಲ್ಲೇಶ್ವರಂ, ಯಶವಂತಪುರ, ನವರಂಗ್, ಮೆಜೆಸ್ಟಿಕ್, ವಿಜಯ ನಗರ, ಚಾಮರಾಜಪೇಟೆ, ಗಿರಿನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಸಿಲಿನ ಝಳದಿಂದ ಕಂಗಾಲಾಗಿದ್ದ ಧರೆಗೆ ವರುಣರಾಯ ತಂಪೆರದಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ