ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ| ವಿವಾಹಕ್ಕೆ 50 ಜನರ ಮಿತಿಯೂ ವಿಸ್ತರಣೆ

ತಿರುವನಂತಪುರಂ(ಜು.06): ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಯಲ್ಲಿ ಕೇರಳ ಸರ್ಕಾರ ಸುರಕ್ಷತಾ ಕ್ರಮಗಳ ಪಾಲನೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿ ಭಾನುವಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇರಳ ಸರ್ಕಾರದ ಈ ಆದೇಶ 2021 ಜುಲೈವರೆಗೂ ಅನ್ವಯ ಆಗಲಿದೆ. ಈ ಸಂಬಂಧ ಕೇರಳ ಸರ್ಕಾರ ಕೊರೋನಾ ಸುಗ್ರೀವಾಜ್ಞೆಗೆ ತಿದ್ದುಪಡಿ ಮಾಡಿದೆ.

ಗಡಿಯಲ್ಲಿ ದಾರಿ ತಪ್ಪಿದ ವಿದ್ಯಾರ್ಥಿ: ಶಿಕ್ಷಕರ ಸಾಹಸದಿಂದ ಕೊನೆಗೂ ಎಕ್ಸಾಂ ಬರೆದ..!

ಇದೇ ವೇಳೆ ಮದುವೆಗೆ 50ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಮತ್ತು ಅಂತ್ಯಕ್ರಿಯೆಗೆ 20 ಜನರಷ್ಟೇ ಭಾಗವಹಿಸಬೇಕು. ಪೂರ್ವಾನುಮತಿ ಇಲ್ಲದೇ ಸಮುದಾಯ ಕಾರ್ಯಕ್ರಮ, ಸಭೆ- ಸಮಾರಂಭಗಳನ್ನು ನಡೆಸುವಂತಿಲ್ಲ. ಯಾವುದೇ ಅಂಗಡಿ ಮತ್ತು ಮಾರಾಟ ಮಳಿಗೆಗಳಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಮಾಸ್ಕ್‌ ಧರಿಸದಿದ್ದರೆ 10 ಸಾವಿರ ದಂಡ:

ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಿದೇ ಇದ್ದರೆ 10 ಸಾವಿರ ರು. ದಂಡ ಇಲ್ಲವೇ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮುನ್ನ ಮಾಸ್ಕ್‌ ಧರಿಸದೇ ಇದ್ದಿದ್ದಕ್ಕೆ 2 ಸಾವಿರ ರು. ದಂಡ ವಿಧಿಸಲಾಗುತ್ತಿತ್ತು.