ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು?

ಯಾವಾಗ ಅತುಲ್​​​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಗೊತ್ತಾಯ್ತೋ, ಹೆಂಡತಿ ಮಗನನ್ನ ಸಂಬಂಧಿಕರ ಕೈಗೆ ಒಪ್ಪಿಸಿ ಸೀದಾ ಹರಿಯಾಣಕ್ಕೆ ಹೋಗಿ ತಲೆಮರೆಸಿಕೊಂಡುಬಿಟ್ಟಳು. ಇತ್ತ ಆಕೆಯ ಸಹೋದರ ಮತ್ತು ತಾಯಿ ಅಲಹಾಬಾದ್​​​​​ನ ಸಂಬಂಧಿಕರ ಮನೆ ಸೇರಿಕೊಂಡು ಬಿಟ್ಟಿದ್ರು

First Published Dec 17, 2024, 2:32 PM IST | Last Updated Dec 17, 2024, 2:32 PM IST

ಬೆಂಗಳೂರು: ಇಡೀ ದೇಶದಲ್ಲೇ ಸೆನ್ಸೇಷನ್​​​​​ ಕ್ರಿಯೇಟ್​​ ಮಾಡಿದ್ದ ಟೆಕ್ಕಿ ಅತುಲ್​​ ಆತ್ಮಹತ್ಯೆ ಕೇಸ್​ಗೆ ಈಗ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಯಾವಾಗ ಪ್ರಕರಣ ದೇಶದೆಲ್ಲೆಡೇ ಸದ್ದು ಮಾಡ್ತೋ ಅಲ್ಲಿವರಗೆ ಸೈಲೆಂಟಾಗಿದ್ದ ನಮ್ಮ ಪೊಲೀಸರು ಎದ್ನೋ ಬಿದ್ನೋ ಅಂತ ಹರಿಯಾಣ ಮತ್ತು ಅಲಹಾಬಾದ್​​​ಗೆ ಹೋಗಿ ಆರೋಪಿಗಳನ್ನ ಹುಡುಕಿಕೊಂಡು ಹೊರಟರು.

ಅಟ್​ಲಾಸ್ಟ್​​ ಇವತ್ತು ಅತುಲ್​ ಹೆಂಡತಿ, ಅತ್ತೆ ಮಾವ ಅಂದರ್​ ಆಗಿದ್ದಾರೆ. ಆನ್​ ದ ವೇ ಬರುತ್ತಲೇ ಅವರ ವಿಚಾರಣೆಯನ್ನೂ ಮಾಡಿ ಮುಗಿಸಿದ್ದಾರೆ. ಜೈಲಿಗೂ ಬಿಟ್ಟು ಬಂದಿದ್ದಾರೆ. ಹಾಗಾದ್ರೆ ಅತುಲ್​ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು? ಈ ಪ್ರಕರಣದ ಅಪ್​ಡೇಟ್ಸ್​​ ಏನು? ಅತುಲ್​​​ ಸಾವಿನ ಕಂಪ್ಲೀಟ್​​​ ಅಪ್​ಡೇಟ್ಸ್ ಇಲ್ಲಿದೆ ನೋಡಿ.