ಬೆಂಗಳೂರು- ಮೈಸೂರು ಹೆದ್ದಾರಿ ಕ್ರೆಡಿಟ್‌ ವಾರ್, ಪ್ರತಾಪ್‌ ಸಿಂಹಗೆ ಸುಮಲತಾ ಪರೋಕ್ಷ ಪಂಚ್!

ನನಗೆ ಕ್ರೆಡಿಟ್‌ ತಗೊಳ್ಳೋ ಅವಶ್ಯಕತೆ ಇಲ್ಲ, ಫೋಟೋ ತಗೊಂಡು ಮೀಡಿಯಾ ಬಳಿ ಬರಲು ಆಗಲ್ಲ, ಮೀಡಿಯಾ ಮುಂದೆ ಬಂದು ಕೂತ್ರೆ ಕೆಲಸ  ಆಗಲ್ಲ... ಎಂದು ಪ್ರತಾಪ್‌ ಸಿಂಹಗೆ  ಸುಮಲತಾ ಪರೋಕ್ಷವಾಗಿ ಪಂಚ್‌ ಕೊಟ್ಟಿದ್ದಾರೆ.

First Published Jun 28, 2022, 10:07 PM IST | Last Updated Jun 28, 2022, 10:07 PM IST

ಬೆಂಗಳೂರು (ಜೂನ್ 28): ಬೆಂಗಳೂರು-ಮೈಸೂರು ಹೆದ್ದಾರಿ (bengaluru mysuru expressway) ನಿರ್ಮಾಣ ಪೂರ್ಣವಾಗುವ ಸಮಯದಲ್ಲಿಯೇ ಇದರ ಕ್ರೆಡಿಟ್‌ ವಾರ್ ಆರಂಭವಾಗಿದೆ. ಮೈಸೂರು ಸಂಸದ ಪ್ರತಾಪ್‌ ಸಿಂಹಗೆ (Pratap Simha) ಈ ಕುರಿತಾಗಿ ಮಂಡ್ಯ ಸಂಸದೆ ಸುಮಲತಾ (Sumalatha Ambareesh) ಟಾಂಗ್ ನೀಡಿದ್ದಾರೆ.

ನನಗೆ ಕ್ರೆಡಿಟ್‌ ತಗೊಳ್ಳೋ ಅವಶ್ಯಕತೆ ಇಲ್ಲ, ಫೋಟೋ ತಗೊಂಡು ಮೀಡಿಯಾ ಬಳಿ ಬರಲು ಆಗಲ್ಲ, ಮೀಡಿಯಾ ಮುಂದೆ ಬಂದು ಕೂತ್ರೆ ಕೆಲಸ  ಆಗಲ್ಲ ಎಂದು ಪ್ರತಾಪ್‌ ಸಿಂಹಗೆ  ಸುಮಲತಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಯಾವುದೇ ಸಂದರ್ಭದಲ್ಲಿ ನನ್ನನ್ನ ಚರ್ಚೆಗೆ ಕರೆಯಲಿ: ಪ್ರತಾಪ್‌ ಸಿಂಹ

ಪ್ರತಾಪ್‌ ಸಿಂಹ ಹಾಗೂ ನನ್ನ ನಡುವೆ ಯಾವುದೇ ಶೀತಲ ಸಮರವಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರು ಅವರ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕೆಲಸ ಅವರೆ ಮಾಡಿಸುತ್ತಿದ್ದಾರೆ ಅದಕ್ಕೂ ನನಗೇನೂ ಬೇಸರವಿಲ್ಲ. ನನ್ನಿಂದ ಯಾವುದೇ ಕಾಮಗಾರಿಗಳು ವಿಳಂಬವಾಗಿಲ್ಲ ಎಂದು ಸುಮಲತಾ ಹೇಳಿದ್ದಾರೆ.