ಮುಸ್ಲಿಮರ ಸಹಭಾಗಿತ್ವದಲ್ಲೇ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ

ಹಿಜಾಬ್ ವಿವಾದದ ಬಳಿಕ ಒಂದೊಂದಾಗಿ ಶುರುವಾದ ಹಿಂದೂ- ಮುಸ್ಲಿಂ ಸಂಘರ್ಷ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಒಂದೊಂದೇ ವಿಚಾರದಲ್ಲಿ ಧರ್ಮ ದಂಗಲ್ ಶುರುವಾಗಿದೆ. 
 

First Published Apr 7, 2022, 2:08 PM IST | Last Updated Apr 7, 2022, 2:08 PM IST

ಬೆಂಗಳೂರು (ಏ. 07): ಹಿಜಾಬ್ ವಿವಾದದ ಬಳಿಕ ಒಂದೊಂದಾಗಿ ಶುರುವಾದ ಹಿಂದೂ- ಮುಸ್ಲಿಂ ಸಂಘರ್ಷ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಒಂದೊಂದೇ ವಿಚಾರದಲ್ಲಿ ಧರ್ಮ ದಂಗಲ್ ಶುರುವಾಗಿದೆ. 

ಇದರ ನಡುವೆ ಅಚ್ಚರಿ ಬೆಳವಣಿಗೆ ಎಂಬಂತೆ, ಏಪ್ರಿಲ್ 16 ರಂದು ನಡೆಯಲಿರುವ ಬೆಂಗಳೂರು ಕರಗವನ್ನು ಮುಸ್ಲಿಮರ ಸಹಭಾಗಿತ್ವದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಹಿಂದೂ ಸಂಘಟನೆಗಳ ವಿರೋಧಕ್ಕೆ ಆಡಳಿತ ಮಂಡಳಿ ಡೋಂಟ್ ಕೇರ್ ಎಂದಿದೆ. ಸಂಪ್ರದಾಯದಂತೆ ಆಚರಿಸಲು ಬದ್ಧ ಎಂದಿದೆ ಸಮಿತಿ. ಕರಗ ಉತ್ಸವ ಸಮಿಯನ್ನು ಭೇಟಿ ಮಾಡಿದ ಮುಸ್ಲಿಂ ಮುಖಂಡರು, ಹಿಂದಿನಂತೆಯೇ ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದಿದೆ. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟು, ದರ್ಗಾ ಪ್ರವೇಶಿಸಲಿದೆ.