ರಾಜಧಾನಿ ರಕ್ಷಣೆಗೆ ' ಅಷ್ಟ ದಿಕ್ಪಾಲಕರು'; ಕೊರೊನಾ ತಡೆಗೆ ಸಿಎಂ ಹೊಸ ಪ್ಲಾನ್
ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ಇಡೀ ಬೆಂಗಳೂರನ್ನು 8 ವಲಯವನ್ನಾಗಿಸಿ ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ. ಆಯಾ ವಲಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಯಾ ಸಚಿವರ ಜವಾಬ್ದಾರಿ. ಏನೇ ಆದರೂ ಅದು ಇವರ ಜವಾಬ್ದಾರಿ ಆಗಿರುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಸಮ್ಮತ ವ್ಯಕ್ತವಾಗಿದೆ.
ಬೆಂಗಳೂರು (ಜು. 09): ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ಇಡೀ ಬೆಂಗಳೂರನ್ನು 8 ವಲಯವನ್ನಾಗಿಸಿ ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ. ಆಯಾ ವಲಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಯಾ ಸಚಿವರ ಜವಾಬ್ದಾರಿ. ಏನೇ ಆದರೂ ಅದು ಇವರ ಜವಾಬ್ದಾರಿ ಆಗಿರುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಸಮ್ಮತ ವ್ಯಕ್ತವಾಗಿದೆ.
ಸ್ಫೋಟಕ ಮಾಹಿತಿ ಹೊರಹಾಕಿದ ಸಿಎಂ ಯಡಿಯೂರಪ್ಪ..!
8 ವಲಯಗಳ ಜವಾಬ್ದಾರಿಯನ್ನು ಒಬ್ಬೊಬ್ಬರಿಗೆ ವಹಿಸಲಾಗಿದ್ದು ಆಯಾ ವಲಯದಲ್ಲಿ ಆಂಬುಲೆನ್ಸ್, ಬೆಡ್ ವ್ಯವಸ್ಥೆ, ವೈದ್ಯರ ಬಳಕೆ, ಆಸ್ಪತ್ರೆಗಳ ನಿರ್ವಹಣೆ ಬಗ್ಗೆ ಇವರು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಬೇಕಾಗುತ್ತದೆ. ಇದನ್ನು ಆಧರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ ಎಂಬುದು ಲೆಕ್ಕಾಚಾರವಾಗಿದೆ. ಯಾರಿಗೆ ಯಾವ್ಯಾವ ವಲಯದ ಜವಾಬ್ದಾರಿ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..!