ಕಸಾಯಿಖಾನೆ ಸೇರುತ್ತಿದ್ದ ಕರುವನ್ನು ರಕ್ಷಿಸಿದ ಮಹಮ್ಮದ್ ರಫಿ

ಕರುವಿಗೆ ಭೀಮಾ ಎಂದು ನಾಮಕರಣ ಮಾಡಲಾಗಿದ್ದು, ಕಳೆದ 18 ದಿನಗಳಿಂದ ಕರುವನ್ನು ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಇದೀಗ ಠಾಣೆಯಲ್ಲೇ ಭೀಮನನ್ನು ಸಾಕಲು ಪೊಲೀಸರು ನಿರ್ಧರಿಸಿದ್ದಾರೆ.

First Published Apr 19, 2020, 2:39 PM IST | Last Updated Apr 19, 2020, 4:43 PM IST

ಬೆಂಗಳೂರು(ಏ.19) ಕಸಾಯಿ ಖಾನೆಯ ಪಾಲಾಗುತ್ತಿದ್ದ ಕರುವನ್ನು ರಕ್ಷಿಸಿದ್ದಾರೆ ಬೈಯಪ್ಪನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಮಹಮ್ಮದ್ ರಫಿ. ಅಪರಿಚಿತರು ಟಿಟಿಯೊಳಗೆ ಕವರ್‌ನಲ್ಲಿ ಸುತ್ತಿ ಕಳ್ಳ ಸಾಗಾಣಿಕೆ ಮಾಡುವ ವೇಳೆ ಕರುವನ್ನು ಬೈಯಪ್ಪನಹಳ್ಳಿ ರಕ್ಷಿಸಿದ್ದಾರೆ.

ಆ ಕರುವಿಗೆ ಭೀಮಾ ಎಂದು ನಾಮಕರಣ ಮಾಡಲಾಗಿದ್ದು, ಕಳೆದ 18 ದಿನಗಳಿಂದ ಕರುವನ್ನು ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಇದೀಗ ಠಾಣೆಯಲ್ಲೇ ಭೀಮನನ್ನು ಸಾಕಲು ಪೊಲೀಸರು ನಿರ್ಧರಿಸಿದ್ದಾರೆ.

ಜನರಿಗೆ ಜೀವಕ್ಕಿಂತ ಲೋಟ ಹಾಲೇ ಹೆಚ್ಚಾಯ್ತಾ? ಅರ್ಧ ಲೀಟರ್‌ ಹಾಲಿಗಾಗಿ ಕಿಲೋಮೀಟರ್‌ಗಟ್ಟಲೇ ಕ್ಯೂ..!

ಇನ್ನೂ ಈ ಹಸುವನ್ನು ಸಾಕಿ ಸಲುಹುತ್ತಿರುವ ಬೈಯಪ್ಪನಹಳ್ಳಿ ಇನ್ಸ್ ಪೆಕ್ಟರ್ ಮಹಮ್ಮದ್ ರಫಿ ಸುವರ್ಣನ್ಯೂಸ್ ಜೊತೆ ಭೀಮಾ ಒಡನಾಟದ ಬಗ್ಗೆ ತಮ್ಮ‌ ಅನುಭವ ಹಂಚಿಕೊಂಡಿದ್ದು ಹೀಗೆ..