ಜನರಿಗೆ ಜೀವಕ್ಕಿಂತ ಲೋಟ ಹಾಲೇ ಹೆಚ್ಚಾಯ್ತಾ? ಅರ್ಧ ಲೀಟರ್‌ ಹಾಲಿಗಾಗಿ ಕಿಲೋಮೀಟರ್‌ಗಟ್ಟಲೇ ಕ್ಯೂ..!

ಬಡವರಿಗಾಗಿ ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ಹಾಲು| ಹಾಲಿಗಾಗಿ ಜನರು ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತ ಜನರು| ನಾಗರಬಾವಿಯ ಮಾಳಗಾಳದಲ್ಲಿ ನಡೆದ ಘಟನೆ|ನಾಗರಬಾವಿ ಪ್ರದೇಶಲ್ಲಿ ಮೂರು ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆ| 

First Published Apr 19, 2020, 2:11 PM IST | Last Updated Apr 19, 2020, 2:11 PM IST

ಬೆಂಗಳೂರು(ಏ.19): ಬಡವರಿಗಾಗಿ ರಾಜ್ಯ ಸರ್ಕಾರ ನೀಡುತ್ತಿರುವ ಅರ್ಧ ಲೀಟರ್‌ ಉಚಿತ ಹಾಲಿಗಾಗಿ ಜನರು ಕಿಲೋಮೀಟರ್‌ಗಟ್ಟಲೇ ಕ್ಯೂ ನಿಂತ ಘಟನೆ ನಾಗರಬಾವಿಯ ಮಾಳಗಾಳದಲ್ಲಿ ಇಂದು(ಭಾನುವಾರ) ನಡೆದಿದೆ. ಕೊರೋನಾ ಪ್ರಕರಣಗಳಿಂದ ನಾಗರಬಾವಿ ಹಾಟ್‌ಸ್ಪಾಟ್‌ ಅಗಿದೆ. ಆದ್ರೂ ಕೂಡ ಜನರಿಗೆ ಮಾತ್ರ ಕೊರೋನಾ ಭಯವೇ ಇಲ್ಲವಾಗಿದೆ. 

ನಾಳೆಯಿಂದ ಕೆಲವೆಡೆ ನಿರ್ಬಂಧ ಸಡಿಲಿಕೆ ಸಾಧ್ಯತೆ; ಯಾವುದಕ್ಕೆ ಸಿಗಲಿದೆ ರಿಲೀಫ್?

ನಾಗರಬಾವಿ ಪ್ರದೇಶಲ್ಲಿ ಮೂರು ಕೊರೋನಾ ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಂಡಿವೆ. ಆದರೂ ಕೂಡ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೇವಲ ಅರ್ಧ ಲೀಟರ್‌ ಹಾಲಿಗಾಗಿ ಜನರು ಎರಡು ಗಂಟೆಯಿಂದ ಕ್ಯೂ ನಿಂತಿದ್ದಾರೆ. 
 

Video Top Stories