Acid Attack: ಅಕ್ಕನ ಮದುವೆಯೇ ತಂಗಿಗೆ ಮುಳುವು, ಆ್ಯಸಿಡ್ ದಾಳಿಗೆ ಕಾರಣವೇನು?

ಸೈಕೋ ಪ್ರೇಮಿ, ತಾನು ಪ್ರೀತಿಸಿದ ಯುವತಿ ಮೇಲೆ  ಆ್ಯಸಿಡ್ ದಾಳಿ (Accid Attack) ಮಾಡೋಕೆ ಕಾರಣವೇನು ಎಂದು ನೋಡಿದಾಗ, ಮೇ. 07 ಕ್ಕೆ ಸಂತ್ರಸ್ತ ಯುವತಿಯ ಅಕ್ಕನ ಮದುವೆ ನಿಗದಿಯಾಗಿತ್ತು. ಅಕ್ಕನ ಮದುವೆ ಕಾರ್ಯಗಳಲ್ಲಿ ತಂಗಿಯನ್ನು ನೋಡಿ ಸಂಬಂಧಿಕರು ಮೆಚ್ಚಿಕೊಂಡಿದ್ದರು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.01): ಸೈಕೋ ಪ್ರೇಮಿ, ತಾನು ಪ್ರೀತಿಸಿದ ಯುವತಿ ಮೇಲೆ ಆ್ಯಸಿಡ್ ದಾಳಿ (Accid Attack) ಮಾಡೋಕೆ ಕಾರಣವೇನು ಎಂದು ನೋಡಿದಾಗ, ಮೇ. 07 ಕ್ಕೆ ಸಂತ್ರಸ್ತ ಯುವತಿಯ ಅಕ್ಕನ ಮದುವೆ ನಿಗದಿಯಾಗಿತ್ತು. ಅಕ್ಕನ ಮದುವೆ ಕಾರ್ಯಗಳಲ್ಲಿ ತಂಗಿಯನ್ನು ನೋಡಿ ಸಂಬಂಧಿಕರು ಮೆಚ್ಚಿಕೊಂಡಿದ್ದರು.

ಮದುವೆಯ ಪ್ರಸ್ತಾಪವನ್ನೂ ಮಾಡಿದ್ದರು. ಅಕ್ಕನ ಮದುವೆ ಬಳಿಕ ತಂಗಿಯ ಮದುವೆ ಮಾಡುತ್ತೇವೆಂದಿದ್ದರು. ಈ ವಿಚಾರ ತಿಳಿದು ನಾಗೇಶ್ ಹುಚ್ಚನಂತಾಗಿದ್ದ. ಯುವತಿಯ ಪೋಷಕರ ಬಳಿ ಬಂದು ತಾನು ಪ್ರೀತಿಸುತ್ತಿರುವ ವಿಚಾರ ಹೇಳಿದ್ದ, ಇದಕ್ಕೆ ಪೋಷಕರು ಒಪ್ಪಿರಲಿಲ್ಲ. ತನಗೆ ಸಿಗದವಳು ಯಾರಿಗೂ ಸಿಗಬಾರದೆಂದು ಆ್ಯಸಿಡ್ ದಾಳಿ ನಡೆಸಿದ್ದಾನೆ. 

Related Video