Asianet Suvarna News Asianet Suvarna News

ಯಾರಾಗಲಿದ್ದಾರೆ ಬೆಳಗಾವಿಯ ಬಿಜೆಪಿ ಮೊದಲ ಮೇಯರ್.?

Sep 7, 2021, 10:41 AM IST

ಬೆಂಗಳೂರು (ಸೆ. 07): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಮಲ ಕಮಾಲ್ ಮಾಡಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಇದೀಗ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಜಿಲ್ಲಾ ಬಿಜೆಪಿಯಲ್ಲಿ ಚರ್ಚೆ ಗರಿಗೆದರಿದೆ.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಪಕ್ಕಾ, ಸಿಎಂ ಭೇಟಿಯಾದ ಎಚ್‌ಡಿಕೆ

ಮೇಯರ್ ಸ್ಥಾನ ಸಾಮಾನ್ಯ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಮೇಯರ್, ಉತ್ತರ ಕ್ಷೇತ್ರಕ್ಕೆ ಉಪಮೇಯರ್ ಸ್ಥಾನ ಸಿಗುವ ಸಾಧ್ಯತೆ ಇದೆ. ಹಿರಿಯ ಕಾರ್ಯಕರ್ತರಿಗೆ ಮೇಯರ್ ಪಟ್ಟ ಸಿಗುವ ಸಾಧ್ಯತೆ ಇದೆ. ಮಂಗೇಸ್ ಪವಾರ್ ಹೆಸರು ಮುಂಚೂಣಿಯಲ್ಲಿದೆ.