
MLC Election Result: ಸತೀಶ್ ಜಾರಕಿಹೊಳಿ ಪಕ್ಕಾ ತಂತ್ರಗಾರಿಕೆ, ಬಿಜೆಪಿಗೆ ಸೋಲು
ಬಿಜೆಪಿ ಭದ್ರಕೋಟೆ ಬೆಳಗಾವಿಯಲ್ಲಿ (Belagavi) ಅಭ್ಯರ್ಥಿ ಮಹಾಂತೇಶ್ ಕವಟಗಿಮಠ (Mahantesh Kavatagimutt) ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ 13 ಶಾಸಕರು, ಇಬ್ಬರು ಸಂಸದರು, ಒಬ್ಬರು ರಾಜ್ಯಸಭಾ ಸದಸ್ಯರಿದ್ದರೂ ಬಿಜೆಪಿಗೆ ಮುಖಭಂಗವಾಗಿದೆ.
ಬೆಂಗಳೂರು (ಡಿ. 15): ಬಿಜೆಪಿ ಭದ್ರಕೋಟೆ ಬೆಳಗಾವಿಯಲ್ಲಿ (Belagavi) ಅಭ್ಯರ್ಥಿ ಮಹಾಂತೇಶ್ ಕವಟಗಿಮಠ (Mahantesh Kavatagimutt) ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ 13 ಶಾಸಕರು, ಇಬ್ಬರು ಸಂಸದರು, ಒಬ್ಬರು ರಾಜ್ಯಸಭಾ ಸದಸ್ಯರಿದ್ದರೂ ಬಿಜೆಪಿಗೆ ಮುಖಭಂಗವಾಗಿದೆ.
MLC Election Result: ಬಿಜೆಪಿಗೆ ಜಾರಕಿಹೊಳಿ ಶಾಕ್, ಮಹಾಂತೇಶ್ ಕವಟಗಿಮಠ ಪ್ರತಿಕ್ರಿಯೆ
ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿಯನ್ನು ನಿಲ್ಲಿಸಬೇಡಿ ಎಂದು ಬಿಜೆಪಿ ಹೈಕಮಾಂಡ್ ಜಾರಕಿಹೊಳಿ ಬ್ರದರ್ಸ್‌ಗೆ ಹೇಳಿತ್ತು. ಆದರೆ ಹೈಕಮಾಂಡ್ ಮಾತನ್ನು ಧಿಕ್ಕರಿಸಿ, ಲಖನ್‌ರನ್ನು ನಿಲ್ಲಿಸಿದ್ರು ಬಾಲಚಂದ್ರ, ಹಾಗೂ ರಮೇಶ್ ಜಾರಕಿಹೊಳಿ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ, ಗೆಲುವಿನ ನಿರೀಕ್ಷೆಯಲ್ಲಿದ್ದರು ಜಾರಕಿಹೊಳಿ ಬ್ರದರ್ಸ್. ಆದರೆ ಸತೀಶ್ ಜಾರಕಿಹೊಳಿ ಪಕ್ಕಾ ತಂತ್ರಗಾರಿಕೆಯಿಂದಾಗಿ ಬಿಜೆಪಿಗೆ ಸೋಲಾಗಿದೆ. ಈಗ ಜಾರಕಿಹೊಳಿ ಬ್ರದರ್ಸ್ ಮೇಲೆ ಹೈಕಮಾಂಡ್ ಕ್ರಮಕ್ಕೆ ಮುಂದಾಗುತ್ತಾ.? ಏನೆಲ್ಲಾ ಸಾಧ್ಯತೆಗಳಿವೆ.?