ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರೂರಲ್ಲಿ ಮತ್ತೊಬ್ಬ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ!

ಬೆಳಗಾವಿ ಜಿಲ್ಲೆಯಲ್ಲಿ ವಿಧವೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರ ಎದುರೇ ಮಹಿಳೆಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Sathish Kumar KH  | Updated: Mar 18, 2025, 8:47 PM IST

ಬೆಳಗಾವಿ (ಮಾ.18): ವಿಧವೆಯನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆದ ಕೀಚಕರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರ್ಲಾಪುರ ಬಳಿ ಘಟನೆ ನಡೆದಿದೆ.

ಪೊಲೀಸರ ಎದುರೇ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 10 ಎಕರೆ ಜಮೀನು ಸಂಬಂಧ ಎರಡು ಕುಟುಂಬಗಳ ನಡುವೆ ಗಲಾಟೆ. ಈ ಜಮೀನು ‌ವ್ಯಾಜ್ಯಕ್ಕೆ ತಡೆಯಾಜ್ಞೆ ನೀಡಿರುವ ಕೋರ್ಟ್. ಜಮೀನಿನಲ್ಲಿ ‌ಬೆಳೆದ ಹುರಳಿ ಒಂದೆಡೆ ಕೂಡಿಹಾಕುವ 15 ಕ್ಕೂ ಅಧಿಕ ಜನರ ಗುಂಪು ‌ಆಗಮಿಸಿದೆ.  ರೈತ ಸಂಘದ ಹೆಸರಿನಲ್ಲಿ ಬಂದ 15 ಕ್ಕೂ ಅಧಿಕ ಜನ ವಿಧವೆ ಜೊತೆಗೆ ವಾದ ಮಾಡಿದ್ದಾರೆ. ಕೋರ್ಟ್ ತಡೆಯಾಜ್ಞೆ ಇದೆ ಎಂದರೂ ಕೇಳದೇ ನಮ್ಮ ಬಳಿ ಬಾಂಡ್ ಇದೆ ಎಂದು ಹುರಳಿ ಒಯ್ಯಲು ಯತ್ನ ಮಾಡಿದ್ದಾರೆ.ಆಗ ವಿಧವೆ ಮತ್ತು ಗುಂಪಿನ ‌ಸದಸ್ಯರ ಮಧ್ಯೆ ವಾದ ವಿಕೋಪಕ್ಕೆ ತಿರುಗಿದೆ. ಈ ವೇಳೆ ವಿಧವೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೈದಿದ್ದಾರೆ. ಘಟನೆಯಲ್ಲಿ ವಿಧವೆಯ ಗರ್ಭಕೋಶಕ್ಕೆ ಪೆಟ್ಟಾಗಿ ರಕ್ತಸ್ರಾವ ಆಗಿದೆ. ಹರಿದ ಬಟ್ಟೆಯನ್ನೇ ಸುತ್ತಿಕೊಂಡು ಟ್ರ್ಯಾಕ್ಟರ್‌ನಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. 

ಪೊಲೀಸರು ಹಲ್ಲೆಗೊಳಗಾದ ಮಹಿಳೆಗೆ ಬಟ್ಟೆ ಕೊಟ್ಟಿದ್ದಾರೆ. ಸಂಬಂಧಿ ಬೈಕ್ ಮೇಲೆ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಧಾರವಾಡ ಜಿಲ್ಲಾ ಆಸ್ಪತ್ರೆಗೆ ವಿಧವೆ ರವಾನಿಸಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೆಲ್ಲ ಕ್ರೌರ್ಯ ನಡೆದರೂ ಸವದತ್ತಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.

Read More...