ಬೆಳಗಾವಿ: ಮೆದುಳು ಜ್ವರದಿಂದ ಬಳಲುತ್ತಿರುವ ಮಗ, ಉಳಿಸಿಕೊಳ್ಳಲು ನೆರವಿನ ನಿರೀಕ್ಷೆಯಲ್ಲಿ ಪೋಷಕರು

ಮೆದುಳು ಜ್ವರದಿಂದ (Brain Fever) ಬಳಲುತ್ತಿರುವ ಏಳೂವರೆ ವರ್ಷದ ಶೈಲೇಶ್ ಎಂಬ ಬಾಲಕನನ್ನು ಉಳಿಸಿಕೊಳ್ಳಲು ಹತ್ತವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಬೆಳಗಾವಿಯ (Belagavi)  ಖಾನಾಪುರದ  (Khanapura) ನಂದಗಡದಲ್ಲಿ ಇಂತಹ ಮನಕಲಕುವ ಘಟನೆ ನಡೆದಿದೆ. 

First Published Jun 22, 2022, 10:42 AM IST | Last Updated Jun 22, 2022, 10:46 AM IST

ಬೆಳಗಾವಿ (ಜೂ. 22): ಮೆದುಳು ಜ್ವರದಿಂದ (Brain Fever) ಬಳಲುತ್ತಿರುವ ಏಳೂವರೆ ವರ್ಷದ ಶೈಲೇಶ್ ಎಂಬ ಬಾಲಕನನ್ನು ಉಳಿಸಿಕೊಳ್ಳಲು ಹತ್ತವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಬೆಳಗಾವಿಯ (Belagavi)  ಖಾನಾಪುರದ  (Khanapura) ನಂದಗಡದಲ್ಲಿ ಇಂತಹ ಮನಕಲಕುವ ಘಟನೆ ನಡೆದಿದೆ. 

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು, ಭಾವನಾತ್ಮಕ ಬಂಧಕ್ಕೆ ಕಣ್ಣೀರಾದ ಜನ

 ಕೂಲಿ ಕೆಲಸ ಮಾಡುವ ಕೃಷ್ಣಾ ಮತ್ತು ಸುಮಿತ್ರಾ ದಂಪತಿಯ ಮಗ ಈ ಶೈಲೇಶ್. 2 ತಿಂಗಳಿನಿಂದ ಮೆದುಳು ಜ್ವರದಿಂದ ಬಳಲುತ್ತಿದ್ದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಹುಷಾರಾಗಲಿಲ್ಲ. ಇನ್ನು ಅರ್ಧ ಗಂಟೆ ಮಾತ್ರ ಬದುಕುತ್ತಾನೆ ಎಂಬ ವೈದ್ಯರು ಹೇಳಿದ್ದಾರೆ. ಕೊನೆಯ ಪ್ರಯತ್ನ ಎಂಬಂತೆ ಶಿಲುಬೆ ಮುಂದೆ ಮಗನನ್ನು ಮಲಗಿಸಿ ಪ್ರಾರ್ಥಿಸಿದ್ದಾರೆ. ನೆರವಿನ ನಿರೀಕ್ಷೆಯಲ್ಲಿದ್ದಾರೆ ಪೋಷಕರು.