Asianet Suvarna News Asianet Suvarna News

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು, ಭಾವನಾತ್ಮಕ ಬಂಧಕ್ಕೆ ಕಣ್ಣೀರಾದ ಜನ

ಅಪ್ಪ (Father) ಅಂದ್ರೆ ಹೆಣ್ಮಕ್ಕಳ ಪಾಲಿಗೆ ತುಂಬಾನೇ ಸ್ಪೆಷಲ್‌. ಆದ್ರೆ ಆಕೆಯ ಅಪ್ಪ ವರ್ಷಗಳ ಹಿಂದೆಯೇ ತೀರಿ ಹೋಗಿದ್ರು. ಆದ್ರೆ ಜೀವನ (Life)ದಲ್ಲಿ ಮಹತ್ತರ ದಿನವಾದ ಮದುವೆಯಂದು ತಂದೆ ಇಲ್ಲಾಂದ್ರೆ ಮಗಳ (Daughter) ಆಗುತ್ತಾ ? ಹಾಗಂತ ಸತ್ತೋರನ್ನು ಮತ್ತೆ ಬದುಕಿಸಿ ಕರೆ ತರೋಕೆ ಆಗಲ್ಲ. ಅದಕ್ಕಾಗಿ ಆಕೆ ಮಾಡಿದ್ದೇನು ನೋಡಿ. 

ತಂದೆಯೊಬ್ಬರು ತಮ್ಮ ಪ್ರೀತಿಯ ಮಗಳ (Daughter) ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದರು. ಮಗಳೂ ಅಷ್ಟೆ ತಂದೆ ತನ್ನ ಮದುವೆ (Marriage)ಯಲ್ಲಿ ಹೀಗೆಲ್ಲಾ ಓಡಾಡ್ಬೇಕು, ಮನದುಂಬಿ ನನ್ನನ್ನು ಹರಸ್ಬೇಕು ಎಂದೆಲ್ಲಾ ಕನಸು ಕಂಡಿದ್ದಳು. ಆದ್ರೆ ಜೀವನದಲ್ಲಿ ವಿಧಿಯಾಟ ಬೇರೇನೇ ಇತ್ತು. ಅಕಾಲಿಕವಾಗಿ ತಂದೆ ಮೃತಪಟ್ಟರು. ಮಗಳ ಮದುವೆ ಫಿಕ್ಸ್ ಆಗಿ, ಮುಹೂರ್ತವೂ ಬಂತು. ಆದರೆ ತಂದೆಯಿಲ್ಲ. ಅಪ್ಪನಿಲ್ಲದೆ ಹಸೆಮಣೆ ಏರಲು ಮಗಳಿಗೆ ಇಷ್ಟವಿರಲಿಲ್ಲ. ಈ ಸಂಬಂಧ ಬಿಡಲು ಮನೆಯವರಿಗೂ ಮನಸ್ಸಿರಲಿಲ್ಲ.ಕೊನೆಯದಾಗಿ ಮಗಳ ಕನಸೂ ಈಡರಿದೆ, ಮನೆಯವರ ಬಯಕೆಯೂ ಪೂರೈಕೆಯಾಗಿದೆ. ಅಷ್ಟೇ ಅಲ್ಲ, ಮಗಳ ಮದುವೆ ನೋಡಬೇಕು ಅಂತಿದ್ದ ತಂದೆ ಕನಸೂ ನನಸಾದಂತಾಗಿದೆ.  ಹುಡುಗಿ ಮಂಟಪ ಸಮೀಪ ತಂದೆಯ ಮೇಣದ ಪ್ರತಿಮೆ (Wax statue)ಯಿಟ್ಟು, ತಂದೆಯ ಆರ್ಶೀವಾದ ಪಡೆದುಕೊಂಡು ಮದುವೆಯಾಗಿದ್ದಾಳೆ. 

ತಮಿಳುನಾಡು (Tamilnadu) ರಾಜ್ಯದಲ್ಲಿ ಇಂಥದ್ದೊಂದು ಮನ ಮನ ಮಿಡಿಯುವ ಘಟನೆ ನಡೆದಿದೆ. ತಮಿಳುನಾಡಿನ ತಿರುಕೋವಿಲೂರು ಸಮೀಪದ ಠಾಣಕನಂದಲ್ ಗ್ರಾಮದಲ್ಲಿ  ಮಹೇಶ್ವರಿ ಎಂಬುವರು ತಮ್ಮ ಮದುವೆಯನ್ನು ತಂದೆಯ ಮೇಣದ ಪ್ರತಿಮೆ ಮುಂದೆ ಮಾಡಿಕೊಂಡಿದ್ದಾರೆ. ಇವರ ತಂದೆ ಸೆಲ್ವರಾಜ್ ಕಳೆದ ವರ್ಷ ಮಾರ್ಚ್ 3ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಸೆಲ್ವರಾಜ್​ಗೆ ತಾನು ಬದುಕಿದ್ದಾಗಲೇ ಮಗಳ ಮದುವೆ ಮಾಡಬೇಕೆಂಬ ಇಚ್ಛೆ ಇತ್ತು. ಇತ್ತ, ತಂದೆಯ ಮೇಲೆ ವಾತ್ಸಲ್ಯ ಹೊಂದಿರುವ ಮಹೇಶ್ವರಿ ತನ್ನ ಮದುವೆಗೆ ತಂದೆ ಇಲ್ಲವೆಂದು ಕೊರಗು ಕಾಡುತ್ತಿತ್ತು. ಹೀಗಾಗಿ ಮೇಣದ ಪ್ರತಿಮೆಯನ್ನು ಮಂಟಪದ ಸಮೀಪ ಇರಿಸಿ, ತಂದೆ ಜೊತೆಗೇ ಇದ್ದಾರೆಂಬ ಖುಷಿಯೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. 

ತಂದೆ ಹಾಗೂ ಮಗಳ ಆಸೆ ಈಡೇರಿಸಲು ಸೆಲ್ವರಾಜ್ ಕುಟುಂಬವು 5 ಲಕ್ಷ ವೆಚ್ಚದಲ್ಲಿ ಅವರ ಮೇಣದ ಪ್ರತಿಮೆಯನ್ನು ಮಾಡಲು ನಿರ್ಧರಿಸಿತು. ಸೆಲ್ವರಾಜ್ ರೇಷ್ಮೆ ವೇಷಭೂಷಣ ಮತ್ತು ಶರ್ಟ್‌ನಲ್ಲಿ ಕುಳಿತಿರುವಂತೆ ಅವರು ಪ್ರತಿಮೆಯನ್ನು ನೈಜವಾಗಿ ಮಾಡಿಸಲಾಯಿತು. ಸೆಲ್ವರಾಜ್ ಮೂರ್ತಿಯನ್ನು ಪುರೋಹಿತರ ಮುಂದೆ ಇಟ್ಟು ವಿವಾಹ ಕಾರ್ಯಕ್ರಮಗಳು ನಡೆಸಲಾಯಿತು. 

Video Top Stories