ಪರಿಶೀಲನೆ ವೇಳೆ ಆಕ್ಸಿಜನ್, ಬೆಡ್, ಐಸಿಯು ಸುಳ್ಳು ಲೆಕ್ಕ; 2 ಆಸ್ಪತ್ರೆಗಳಿಗೆ ನೊಟೀಸ್

- ಬೆಡ್ ನಿರ್ವಹಣೆಯಲ್ಲಿ ಖಾಸಗಿ ಆಸ್ಪತ್ರೆಗಳು ವಿಫಲ

- ಆಸ್ಪತ್ರೆಯಲ್ಲಿ ಇದ್ದಿದ್ದು 20 ಬೆಟ್, 30 ಆಕ್ಸಿಜನ್‌ಗೆ ಬೇಡಿಕೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆ ಕರ್ಮಕಾಂಡವಿದು. 

- ಸುಳ್ಳು ಲೆಕ್ಕ ನೀಡಿದ ಆಸ್ಪತ್ರೆಗಳಿಗೆ ನೊಟೀಸ್

First Published May 11, 2021, 12:37 PM IST | Last Updated May 11, 2021, 12:37 PM IST

ಬೆಂಗಳೂರು (ಮೇ. 11): ಕೋವಿಡ್‌ಗೆ ಬೆಡ್ ಮೀಸಲಿಡಿ ಎಂದು ಸರ್ಕಾರ ಎಷ್ಟೇ ಹೇಳಿದರೂ ಖಾಸಗಿ ಆಸ್ಪತ್ರೆಗಳು ಮಾತು ಕೇಳುತ್ತಿಲ್ಲ. ಬೆಡ್ ನಿರ್ವಹಣೆಯಲ್ಲಿ ಖಾಸಗಿ ಆಸ್ಪತ್ರೆಗಳು ವಿಫಲಾಗಿದೆ.  ಆಸ್ಪತ್ರೆಯಲ್ಲಿ ಇದ್ದಿದ್ದು 20 ಬೆಡ್, 30 ಆಕ್ಸಿಜನ್‌ಗೆ ಬೇಡಿಕೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆ ಕರ್ಮಕಾಂಡವಿದು. ಎಸಿ ಗಂಗಪ್ಪ ನೇತೃತ್ವದಲ್ಲಿ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ಆಕ್ಸಿಜನ್, ಬೆಡ್, ಹಾಗೂ ಐಸಿಯು ಸುಳ್ಳು ಲೆಕ್ಕ ನೀಡಿದ ಶಕುಂತಲಾ ಮಲ್ಟಿ ಸ್ಪೆಷಾಲಿಟಿ ಹಾಗೂ ಅಲ್ಲಮಪ್ರಭು ಆಸ್ಪತ್ರೆಗೆ ನೊಟೀಸ್ ಜಾರಿಗೊಳಿಸಲಾಗಿದೆ. 

Video Top Stories