Asianet Suvarna News Asianet Suvarna News

ಸೇವಾ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಪತ್ರ ಬರೆದ BDA ಕಮಿಷನರ್

ಸೇವಾ ದಾಖಲಾತಿಗಳಲ್ಲಿ ಜನ್ಮ ದಿನಾಂಕ ಕುರಿತು ಉಂಟಾಗಿರುವ ಸಮಸ್ಯೆ ಪರಿಹರಿಸುವಂತೆ ಬಿಡಿಎ ಆಯುಕ್ತ ಡಾ. ಎಚ್ ಆರ್ ಮಹಾದೇವ್ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. 
 

Feb 26, 2021, 11:00 AM IST

ಬೆಂಗಳೂರು (ಫೆ. 26): ಸೇವಾ ದಾಖಲಾತಿಗಳಲ್ಲಿ ಜನ್ಮ ದಿನಾಂಕ ಕುರಿತು ಉಂಟಾಗಿರುವ ಸಮಸ್ಯೆ ಪರಿಹರಿಸುವಂತೆ ಬಿಡಿಎ ಆಯುಕ್ತ ಡಾ. ಎಚ್ ಆರ್ ಮಹಾದೇವ್ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಈ ವಿಚಾರದ ಬಗ್ಗೆ ನನ್ನ ಬಗ್ಗೆ ಕೆಲ ಖಾಸಗಿ ವಾಹಿನಿಗಳು ತಪ್ಪು ಮಾಹಿತಿ ಪ್ರಸಾರ ಮಾಡಿದೆ ಎಂದು ಮಹಾದೇವ್ ಸ್ಪಷ್ಟನೆ ಕೊಟ್ಟಿದ್ದಾರೆ. 'ಸರ್ಕಾರಿ ಅಧಿಕಾರಿಯಾಗಿ ನನ್ನ ಹಕ್ಕನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದೇನೆ. ನಿವೃತ್ತಿ ಸಂದರ್ಭದಲ್ಲಿ ಸೇವಾವಧಿ ವಿಸ್ತರಿಸುವಂತೆ ಕೇಳುವ ಹಕ್ಕು ಪ್ರತಿಯೊಬ್ಬ ನೌಕರನಿಗಿದೆ. ಸೇವಾವಧಿ ವಿಸ್ತರಣೆ ಮಾಡುವುದು ಸರ್ಕಾರ ಹಾಗೂ ಸಿಎಂ ವಿವೇಚನೆಗೆ ಬಿಟ್ಟಿದ್ದು' ಎಂದು ಮಹಾದೇವ್ ಹೇಳಿದ್ದಾರೆ. 

ಕೊರೊನಾ ಕೇಸ್‌ಗಳು ಹೆಚ್ಚುತ್ತಿದ್ದರೂ ಕಾಲೇಜು ನಿರ್ಲಕ್ಷ್ಯ, ವಿದ್ಯಾರ್ಥಿಗಳ ಆಕ್ರೋಶ

Video Top Stories