ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬಿಬಿಎಂಪಿ ಬೆಂಕಿ ದುರಂತ, ತನಿಖೆಗೂ ಮುನ್ನವೇ ಕಾಂಗ್ರೆಸ್‌ 'ಬೆಂಕಿ' ಟ್ವೀಟ್‌!

ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬಿಬಿಎಂಪಿ ಬೆಂಕಿ ದುರಂತ ಸಂಭವಿಸಿದೆ. ಬೆಂಜಿನ್ ಸೋರಿಕೆಯಿಂದ್ಲೇ ಕಂಟ್ರೋಲ್ ರೂಮ್ ಧಗಧಗ ಎಂದಿದೆ. ಆಡಿಯೋ ಸಾಕ್ಷ್ಯದಲ್ಲಿ ಅಧಿಕಾರಿಗಳ ಬಂಡವಾಳ ಬಯಲಾಗಿದೆ.

First Published Aug 12, 2023, 11:18 PM IST | Last Updated Aug 12, 2023, 11:18 PM IST

ಬೆಂಗಳೂರು (ಆ.12): ಕಮಿಷನ್ ಆರೋಪದ ಬೆನ್ನಲ್ಲೇ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು. ರಾಜಕೀಯ ಅಂಗಳದಲ್ಲಿ ಈ ಪ್ರಕರಣ ಸಹಜವಾಗಿ ಭಾರಿ ಸಂಚಲನ ಮೂಡಿಸಿತ್ತು. ಬೆಂಕಿ ಬಿದ್ದ ಕ್ಷಣದಿಂದಲೇ ರಾಜಕೀಯದ ಕಿಡಿ ಕೂಡಾ ಹೊತ್ತಿಕೊಂಡಿತ್ತು. ಘಟನೆ ನಡೆಯುತ್ತಿದ್ದಂತೆಯೇ ಬೆಳಗಾವಿಯಿಂದ ಬೆಂಗಳೂರಿಗೆ ಬಂದ ಸಿಎಂ, ಡಿಸಿಎಂ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

ಈ ನಡುವೆ ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ. ಆದರೆ, ತನಿಖೆಗೂ ಮುನ್ನವೇ ಇದು ಬಿಜೆಪಿ ಹಾಕಿಸಿದ ಬೆಂಕಿ ಎಂದು ನೇರವಾಗಿ ಆರೋಪ ಮಾಡಿದ್ದ ಕಾಂಗ್ರೆಸ್‌ ಈಗ ಮುಜುಗರಕ್ಕೆ ಈಡಾಗಿದೆ.

 

ಬಿಬಿಎಂಪಿ ಅಗ್ನಿ ದುರಂತ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಬೆಂಕಿ ಇಟ್ಟವರ‍್ಯಾರು?

ಸ್ವತಃ ಡಿಕೆ ಶಿವಕುಮಾರ್‌ ಈ ಬಗ್ಗೆ ಮಾತನಾಡಿದ್ದು, ತನಿಖೆಗೂ ಮೊದಲೇ ನಿರ್ಧಾರಕ್ಕೆ ಬರಲ್ಲ. ನಮ್ಮ ಹುಡುಗರು ಏನೋ ಟ್ವೀಟ್ ಮಾಡಿದ್ದಾರೆ, ವಾಪಸ್ ತೆಗೆಸಿದ್ದೇನೆ ಅಂತಾ ಹೇಳಿದ್ದಾರೆ. ಇನ್ನು ದಿನೇಶ್‌ ಗುಂಡೂರಾವ್‌ ಕೂಡ ಇದೇ ಮಾತು ಹೇಳಿದ್ದಾರೆ.