ಬಿಬಿಎಂಪಿ ಅಗ್ನಿ ದುರಂತ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಬೆಂಕಿ ಇಟ್ಟವರ‍್ಯಾರು?
ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಲ್ಯಾಬ್‌ನ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಬಿಬಿಎಂಪಿಯ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು (ಆ.12): ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಲ್ಯಾಬ್‌ನ ಬೆಂಕಿ ಅವಘಡದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದರ ಜೊತೆಗೆ ಹಲಸೂರು ಗೇಟ್ ಪೊಲೀಸರು ಬಿಬಿಎಂಪಿಯ ಇಬ್ಬರನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಬಿಬಿಎಂಪಿ ಅಧಿಕಾರಿಗಳು ತಡರಾತ್ರಿ ದೂರು ನೀಡಿದ್ದರು. ಇದೀಗ ಲ್ಯಾಬ್ ಟೆಕ್ನಿಷಿಯನ್ ಸುರೇಶ್ ಹಾಗೂ AW ಆನಂದ್ ಅವರನ್ನು ವಶಕ್ಕೆ ಪಡೆದಯಲಾಗಿದೆ.
ಲ್ಯಾಬ್‌ನಲ್ಲಿ ತೆಗದುಕೊಂಡಿರಬೇಕಾದ ಸುರಕ್ಷಿತ ಕ್ರಮಗಳು ಆಗಿಲ್ಲ. ಬೆಂಕಿ ನಂದಿಸಲು ಸರಿಯಾದ ಉಪಕರಣಗಳು ಇರಲಿಲ್ಲ. ಲ್ಯಾಬ್‌ನಲ್ಲಿ ಧರಿಸಬೇಕಾದ ವಸ್ತ್ರಗಳನ್ನ ಸಹ ಧರಿಸಿಲ್ಲ. ಗುಣಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿಲ್ಲ. ಲ್ಯಾಬ್‌ನ್ನು ಟಿಕ್ನಿಕಲ್ ಆಗಿ ನಿರ್ವಾಹಣೆ ಮಾಡಿಲ್ಲ. ಡಾಂಬರ್ ಮತ್ತು ಸಿಮೆಂಟ್ ಸೇರಿದಂತೆ ಇತರೆ ಕೆಮಿಕಲ್‌ಗಳನ್ನ ಲ್ಯಾಬ್‌ನಲ್ಲಿ ಪರಿಶೀಲನೆ ನಡೆಸಲಾಗುತ್ತಿತ್ತು. ಡಾಂಬರ್‌ಗೆ ಸಂಬಂಧ ಪಟ್ಟ ಟೆಸ್ಟ್‌ನಲ್ಲಿ ನಿರ್ದಿಷ್ಟ ಶಾಖದಲ್ಲಿ ಪರಿಶೀಲನೆ ನಡೆಯುತ್ತಿತ್ತು. ಈ ವೇಳೆ ಅವಘಡ ನಡೆದಿರುವ ಸಾಧ್ಯತೆ ಇದೆ. ಸದ್ಯ ಹಲಸೂರು ಗೇಟ್ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಲ್ಯಾಬ್‌ಗೆ ಬೆಂಕಿ: ಮುಖ್ಯ ಎಂಜಿನಿಯರ್ ಸೇರಿ 9 ಮಂದಿ ಗಂಭೀರ
ಘಟನೆ ನಡೆದಾಗ ಬಿಬಿಎಂಪಿ ಗುಣ ನಿಯಂತ್ರಣ ಲ್ಯಾಬ್ ನಲ್ಲಿ ಇದ್ದ ಸಿಬ್ಬಂದಿಗಳ ಮುಖ ಭಾಗಶಃ ಸುಟ್ಟು ಹೋಗಿದೆ. ಮಹಿಳೆಯರ ಮುಖ 25% ಸುಟ್ಟು ಹೋಗಿದೆ. ಪ್ರಯೋಗಾಲಯದಲ್ಲಿ ವರ್ಕ್ ಮಾಡ್ತಾ ಇದ್ದ ಇಬ್ಬರು ಮಹಿಳೆಯರಿಗೆ ಸ್ಪೋಟಗೊಂಡಾಗ ಮುಖ ಸುಟ್ಟು ಹೋಗಿದೆ. ಇವರಿಗೆ ವಿಕ್ಟೋರಿಯಾದ ಟ್ರಾಮಾಕೇರ್ ನಾ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಹಿಳೆಯರ ಮುಖ ಸುಟ್ಟಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಇವರೆಲ್ಲ 25 ವರ್ಷದ ಅಸುಪಾಸಿನ ವಯಸ್ಸಿನ ಇಬ್ಬರು ಮಹಿಳೆಯರ ಮುಖ ಸುಟ್ಟದ್ದರಿಂದ ಅವರ ಮುಂದಿನ ಜೀವನದ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ.
ಇನ್ನು ಅಗ್ನಿ ಶಾಮಕ ದಳದ ಅಧಿಕಾರಿಗಳಿಂದ ಬಿಬಿಎಂಪಿ ಕೇಂದ್ರ ಕಛೇರಿಯ ಲ್ಯಾಬ್‌ನಲ್ಲಿನ ಬೆಂಕಿ ಅವಘಡ ನಡೆದ ಸ್ಥಳಕ್ಕೆ ಭೇಟಿ ಮಾಹಿತಿ ಕಲೆ ಹಾಕಿದ್ದಾರೆ. ಅಗ್ನಿಶಾಮಕ ದಳ ನಿರ್ದೇಶಕರಾದ ಶಿವ ಶಂಕರ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.
ಕಮಿಷನ್ ಆರೋಪ ಬೆನ್ನಲ್ಲೇ ಬಿಬಿಎಂಪಿ ಅಗ್ನಿ ದುರಂತ, ಬಿಜೆಪಿ vs ಕಾಂಗ್ರೆಸ್ ಜಟಾಪಟಿ ಶುರು
9 ಮಂದಿಗೂ 30% ಬರ್ನಿಂಗ್:
ಇನ್ನು ಘಟನೆಯಲ್ಲಿ 9 ಮಂದಿಗೂ 30% ಬರ್ನಿಂಗ್ ಆಗಿದೆ. ಶೇ. 30ರಷ್ಟು ಚರ್ಮ ಸುಟ್ಟು ಹೋಗಿರೋದಾಗಿ ವಿಕ್ಟೋರಿಯಾ ವೈದ್ಯರು ಮಾಹಿತಿ ನೀಡಿದ್ದಾರೆ. ಕೈ ಮತ್ತು ಮುಖ ಹೆಚ್ಚು ಸುಟ್ಟುಹೋಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾದ ಸುಟ್ಟಗಾಯಗಳ ವಿಭಾಗದಿಂದ ಟ್ರಾಮಾ ಕೇರ್ ಸೆಂಟರ್ ನ ಐಸಿಯು ಗೆ 9 ಜನರನ್ನು ಶಿಷ್ಟ್ ಮಾಡಲಾಗಿದೆ. ಅದೃಷ್ಟವಶಾತ್ 9 ಜನರ ಕಣ್ಣಿಗೆ ಯಾವ ರೀತಿಯ ಹಾನಿಯೂ ಆಗಿಲ್ಲ. ಕೈ ಮತ್ತು ಮುಖ ಸುಟ್ಟಿದ್ದು ಚಿಕಿತ್ಸೆ ನೀಡಲಾಗ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ್ದು ಹೇಗೆ?
ಸದ್ಯ ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯಲ್ಲಿ ರೋಚಕ ವಿಚಾರ ಬಯಲಾಗಿದೆ. ಪಾಲಿಕೆಯ ಗುಣಮಟ್ಟನಿಯಂತ್ರಣ ವಿಭಾಗ ಅಧಿಕಾರಿಗಳು ರಸ್ತೆಯೊಂದಕ್ಕೆ ಹಾಕಿದ್ದ ಬಿಟಮಿನ್ ಮಿಶ್ರಣ ಮಾದರಿ ಪರೀಕ್ಷೆಗೆ ತಂದಿದ್ದರು. ಆ ಮಿಶ್ರಣವನ್ನು ರಾಸಾಯನಿಕ ಬಳಸಿ ಬೆಂಕಿಯಲ್ಲಿ ಕುದಿಸಿದರು. ಬಿಟಮಿನ್ ಯಾವ್ಯಾವ ರಾಸಾಯನಿಕ ಬಳಸಲಾಗಿದೆ ಎಂಬುದನ್ನ ಪತ್ತೆ ಮಾಡ್ತಾರೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪ್ರಯೋಗಾಲಯದಲ್ಲಿದ್ದ ಇತರೆ ರಾಸಾಯನಿಕ ಪದಾರ್ಥ ಗಳಿಗೂ ಬೆಂಕಿ ತಗುಲಿ ಈ ದುರಂತ ನಡೆದಿದೆ.