News Hour: ಡಿಸಿಎಂ ಡಿಕೆಶಿ ವಿರುದ್ಧ ದೂರು ನೀಡಿದ್ದ ಗುತ್ತಿಗೆದಾರರಿಗೆ ಶಾಕ್

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ ಸರ್ಕಾರ ಶಾಕ್‌ ನೀಡಿದೆ. ದೂರು ನೀಡಿದ ಗುತ್ತಿಗೆದಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

First Published Aug 17, 2023, 10:54 PM IST | Last Updated Aug 17, 2023, 10:54 PM IST

ಬೆಂಗಳೂರು (ಆ.17): ಡಿಸಿಎಂ ಡಿಕೆಶಿ ವಿರುದ್ಧ  ದೂರು ನೀಡಿದ್ದ ಗುತ್ತಿಗೆದಾರರಿಗೆ ಸರ್ಕಾರ ಶಾಕ್‌ ನೀಡಿದೆ. ಅಧ್ಯಕ್ಷ ಮಂಜುನಾಥ್ ಸೇರಿ 57 ಗುತ್ತಿಗೆದಾರರಿಗೆ ಹೈಗ್ರೌಂಡ್ಸ್ ಪೊಲೀಸರಿಂದ ನೋಟಿಸ್‌ ಜಾರಿಯಾಗಿದೆ.  ಬಿಬಿಎಂಪಿ ಗುತ್ತಿಗೆದಾರರ ವಿಚಾರಣೆ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಂಟ್ರಲ್ ಡಿಸಿಪಿ ಶ್ರೀನಿವಾಸ ಗೌಡರ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯಪಾಲರಿಗೆ ಈ 57 ಬಿಬಿಎಂಪಿ ಗುತ್ತಿಗೆದಾರರು ಸಹಿ ಮಾಡಿ ಡಿಕೆಶಿ ವಿರುದ್ಧ ದೂರು ನೀಡಿದ್ದರು. ಗುತ್ತಿಗೆದಾರ ಸಹಿ ಅಸಲಿನಾ ಅಥವಾ ನಕಲಿ ಎಂದು ಪೊಲೀಸರು ವಿಚಾರಣೆ ಮಾಡಲಿದ್ದಾರೆ.

ಬಿಜೆಪಿ ಶಾಸಕ ಸೋಮಶೇಖರ್‌ ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ಪರಮೇಶ್ವರ್‌

ಬಾಕಿ ಬಿಲ್ ಸಂಬಂಧ ರಾಜ್ಯಪಾಲರಿಗೆ ಗುತ್ತಿಗೆದಾರರು ದೂರು ನೀಡಿದ್ದರು. ಗುತ್ತಿಗೆದಾರರ ದೂರಿನ ಬೆನ್ನಲ್ಲೇ ಬಿಬಿಎಂಪಿ ಸಹಾಯಕ ಆಯುಕ್ತ ಮಹದೇವ್ ಪ್ರತಿದೂರು ನೀಡಿದ್ದರು. ಇದರ ಆಧಾರದ ಮೇಲೆ ಗುತ್ತಿಗೆದಾರರು ಅಸಲಿಯೋ, ನಕಲಿಯೋ ಎಂದು ವಿಚಾರಣೆ ನಡೆಯಲಿದೆ.