
ರಾಜ್ಯಾಧ್ಯಕ್ಷ ಸ್ಥಾನಕ್ಕೆ 4 ಆಯ್ಕೆ ಮುಂದಿಟ್ಟ ಯತ್ನಾಳ್ ಬಣ, ರಾಜ್ಯ ಬಿಜೆಪಿ ಬಡಿದಾಟ ಜೋರು
ದೆಹಲಿಯಲ್ಲಿ ರಾಜ್ಯ ಬಿಜೆಪಿಯ ಬಣ ಬಡಿದಾಟ ಹೋರಾಟ ಜೋರಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಬಣ ನಾಲ್ವರ ಹೆಸರನ್ನು ಸೂಚಿಸಿದೆ. ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ನವದೆಹಲಿ(ಫೆ.05) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾಡಿ.. ಇಲ್ಲವೇ ಘೋಷಣೆ ಮಾಡಿ ಎಂದು ರಾಜ್ಯ ಬಿಜೆಪಿಯ ರೆಬೆಲ್ ಬಸನಗೌಡ ಪಾಟೀಲ್ ಯತ್ನಾಳ್ ಬಣ ಪಟ್ಟು ಹಿಡಿದಿದೆ. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿಯಾದ ಯತ್ನಾಳ್ ಬಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮುಂದೆ ನಾಲ್ಕು ಆಯ್ಕೆ ನೀಡಿದೆ. ರೆಬೆಲ್ಸ್ ಟೀಂನ ಹೋರಾಟಕ್ಕೆ ಬಿಜೆಪಿ ತಟಸ್ಥ ಬಣದಿಂದಲೂ ಬೆಂಬಲ ನೀಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಯತ್ನಾಳ್ ಸೂಚಿಸಿದ ಹೆಸರು ಯಾವುದು?