ಚೆನ್ನೈನಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಬಂತು ಅಪರೂಪದ ಮೋಸ್ಟ್ ಅಟ್ರಾಕ್ಟಿವ್ ಬಂಗಾಳ ಬಿಳಿ ಹುಲಿ!

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅಪರೂಪದ ಮೋಸ್ಟ್ ಅಟ್ರಾಕ್ಟಿವ್ ವೈಟ್ ಟೈಗರ್ ಎಂಟ್ರಿಯಾಗಿದೆ.

First Published Apr 24, 2023, 9:47 PM IST | Last Updated Apr 24, 2023, 9:47 PM IST

ಬೆಂಗಳೂರು (ಏ.24): ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅಪರೂಪದ ಮೋಸ್ಟ್ ಅಟ್ರಾಕ್ಟಿವ್ ವೈಟ್ ಟೈಗರ್ ಎಂಟ್ರಿಯಾಗಿದೆ. ಪ್ರಾಣಿ ವಿನಿಮಯ ಯೋಜನೆಯಡಿ ಚೆನ್ನೈನ ಅರಿಗ್ನಾರ್ ಅಣ್ಣಾ ಝೂಲಾಜಿಕಲ್ ಪಾರ್ಕ್‌ ನಲ್ಲಿ ಭೀಷ್ಮಾ ಮತ್ತು ಮೀನಾಗೆ ಜನಿಸಿದ್ದ ಸುಮಾರು 3 ವರ್ಷ ವಯಸ್ಸಿನ ಬಿಳಿ ಬಣ್ಣದ ರಾಯಲ್ ಬೆಂಗಾಲ್ ಟೈಗರ್  ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದೆ. ಬಿಳಿ ಹುಲಿಗೆ ಬದಲಿಯಾಗಿ ಅರಿನ್ನಾಗರ್ ಅಣ್ಣಾ ಮೃಗಾಲಯಕ್ಕೆ 2020 ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸನಾ ಮತ್ತು ಶಂಕರ್ ಸಿಂಹಗಳಿಗೆ ಜನಿಸಿದ ಗಂಡು ಸಿಂಹ ಶೇರ್-ಯಾರ್ ನನ್ನು ರವಾನೆ ಮಾಡಲಾಗಿದೆ. ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಾತಾವರಣಕ್ಕೆ ಹೊಂದಿಕೊಳ್ಳಲು ಹುಲಿಯನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು, ಉದ್ಯಾನವನದ ವೈದ್ಯಕೀಯ ತಂಡದ ನಿಗಾದಲ್ಲಿದ್ದು, ವಾತವರಣಕ್ಕೆ ಹೊಂದಿಕೊಂಡ ಬಳಿಕ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.