ಭಾರೀ ಮಳೆಗೆ ತುಂಬಿದ ಮಲಪ್ರಭೆ; ಬೆಳೆಗಳು ಜಲಾವೃತ, ಕಣ್ಣೀರಿಟ್ಟ ರೈತ.!
ಭಾರೀ ಮಳೆಗೆ ಮಲಪ್ರಭೆ ಉಕ್ಕಿ ಹರಿಯುತ್ತಿದೆ. ಬೆಳೆದಿದ್ದ ಬೆಳೆ, ತರಕಾರಿಗಳೆಲ್ಲಾ ನೀರು ಪಾಲಾಗಿದೆ. ನಂಬಿಕೊಂಡ ಬೆಳೆ ಕೊಚ್ಚಿ ಹೋಗಿದ್ದಕ್ಕೆ, ನಮಗೆ ಮುಂದ್ಯಾರು ಗತಿ ಎಂದು ರೈತ ಕಣ್ಣೀರಿಟ್ಟಿದ್ದಾನೆ. ಸಾಲ ಸೋಲ ಮಾಡಿ ಹೇಗೋ ಬೆಳೆ ಬೆಳೆದಿದ್ದೇವೆ. ಫಸಲು ಕೈಗೆ ಬರುವ ಮೊದಲೇ ಕೊಚ್ಚಿ ಹೋಯಿತಲ್ಲ. ನಾವು ಮುಂದೇನು ಮಾಡಬೇಕು' ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಹಸುಗೂಸಿನೊಂದಿಗೆ ಬಾಣಂತಿ ಪರದಾಡುತ್ತಿದ್ದಾರೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬಾಗಲಕೋಟೆ ( ಆ. 19): ಭಾರೀ ಮಳೆಗೆ ಮಲಪ್ರಭೆ ಉಕ್ಕಿ ಹರಿಯುತ್ತಿದೆ. ಬೆಳೆದಿದ್ದ ಬೆಳೆ, ತರಕಾರಿಗಳೆಲ್ಲಾ ನೀರು ಪಾಲಾಗಿದೆ. ನಂಬಿಕೊಂಡ ಬೆಳೆ ಕೊಚ್ಚಿ ಹೋಗಿದ್ದಕ್ಕೆ, ನಮಗೆ ಮುಂದ್ಯಾರು ಗತಿ ಎಂದು ರೈತ ಕಣ್ಣೀರಿಟ್ಟಿದ್ದಾನೆ. ಸಾಲ ಸೋಲ ಮಾಡಿ ಹೇಗೋ ಬೆಳೆ ಬೆಳೆದಿದ್ದೇವೆ. ಫಸಲು ಕೈಗೆ ಬರುವ ಮೊದಲೇ ಕೊಚ್ಚಿ ಹೋಯಿತಲ್ಲ. ನಾವು ಮುಂದೇನು ಮಾಡಬೇಕು' ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಹಸುಗೂಸಿನೊಂದಿಗೆ ಬಾಣಂತಿ ಪರದಾಡುತ್ತಿದ್ದಾರೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.