ಆಜಾನ್ ವಿವಾದ: ಹಿಂದೂ ಕಾರ್ಯಕರ್ತರನ್ನು ಸ್ವಾಗತಿಸಿ, ಸತ್ಕರಿಸಿ: ಮೌಲಾನ ಮಕ್ಸೂದ್ ಇಮ್ರಾನ್
ಮಸೀದಿಗಳಲ್ಲಿನ (Masjid) ಅಜಾನ್‌ಗೆ (Azaan)ವಿರುದ್ಧವಾಗಿ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ (Temple) ಹನುಮಾನ್ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ, ಭಾಜಾ ಭಜಂತ್ರಿ, ನಾಸಿಕ್ ಡೊಳ್ಳು, ಸಮಾಳ, ಶಂಖ, ಜಾಗಟೆಗಳ ಸದ್ದು ಮೊಳಗಿಸಿದೆ ಶ್ರೀರಾಮಸೇನೆ.
ಬೆಂಗಳೂರು (ಮೇ.09): ಮಸೀದಿಗಳಲ್ಲಿನ (Masjid) ಅಜಾನ್‌ಗೆ (Azaan)ವಿರುದ್ಧವಾಗಿ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ (Temple) ಹನುಮಾನ್ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ, ಭಾಜಾ ಭಜಂತ್ರಿ, ನಾಸಿಕ್ ಡೊಳ್ಳು, ಸಮಾಳ, ಶಂಖ, ಜಾಗಟೆಗಳ ಸದ್ದು ಮೊಳಗಿಸಿದೆ ಶ್ರೀರಾಮಸೇನೆ.
ಈ ಅಭಿಯಾನಕ್ಕೆ ಮುಸ್ಲಿಂ ಮುಖಂಡ ಮೌಲಾನಾ ಮಕ್ಸುದ್ ಪ್ರತಿಕ್ರಿಯಿಸುತ್ತಾ, ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲಾ ಮಸೀದಿಗಳು ಪಾಲಿಸಬೇಕು. ಹಿಂದೂ ಕಾರ್ಯಕರ್ತರು ಮಸೀದಿ ಮುಂದೆ ಬಂದ್ರೆ ಯಾರೂ ವಿರೋಧಿಸಬೇಡಿ. ನೀರು ಬೇಕಾದ್ರೆ ನೀರು ಕೊಡಿ, ಜ್ಯೂಸ್ ಬೇಕಾದ್ರೆ ಜ್ಯೂಸ್ ಕೊಡಿ, ಅವರನ್ನು ಸ್ವಾಗತಿಸಿ' ಎಂದು ಯುವಕರಿಗೆ ಕರೆ ನೀಡಿದ್ದಾರೆ.