Karnataka Azaan Row: ಮಸೀದಿ ಮೈಕ್‌ ತೆರವಿಗೆ ಶ್ರೀರಾಮ ಸೇನೆ ಡೆಡ್‌ಲೈನ್: ಸಂಘರ್ಷದ ವಾರ್ನಿಂಗ್!

*ಆಝಾನ್‌ ವಿರುದ್ಧ ಹಿಂದೂ ಸಂಘಟನೆಗಳ ಸಮರ 
*ಮೈಕ್‌ ತೆರವಿಗೆ ಸರ್ಕಾರಕ್ಕೆ ಶ್ರೀರಾಮ ಸೇನೆ ಡೆಡ್‌ಲೈನ್
*ಮೇ 9ರಂದು ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಸುಪ್ರಭಾತ
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 01): ಆಜಾನ್‌ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಮೇ 1ಕ್ಕೆ ಡೀಸಿಗಳಿಗೆ ಕೊಟ್ಟಂತಹ ಗಡುವು ಮುಕ್ತಾಯವಾಗುತ್ತದೆ. ಸರ್ಕಾರ ಮೈಕ್‌ಗಳನ್ನು ತೆರವುಗೊಳಿಸದೆ ಇದ್ದರೆ ಮೇ 9ರಂದು ಇಡೀ ರಾಜ್ಯಾದ್ಯಂತ ಬೆಳಿಗ್ಗೆ 5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್‌ ಚಾಲಿಸ್‌, ಓಂಕಾರವನ್ನ, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ತಾಕತ್ತಿದ್ದರೆ ತಡೆಯಲಿ ನೋಡೋಣ ಎಂದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದ್ದಾರೆ.

ಇದನ್ನೂ ನೋಡಿಆಜಾನ್ ವಿರುದ್ಧ ಸಮರ: ಬಿಜೆಪಿ ಸರ್ಕಾರಕ್ಕೆ ಧಮ್‌ ಇದ್ದಿದ್ರೆ ಕ್ರಮ ಕೈಗೊಳ್ಳುತ್ತಿದ್ರು: ಮುತಾಲಿಕ್‌

ಮೇ 9ರಂದು ಬೆಳಿಗ್ಗೆ 5 ಗಂಟೆಗೆ ನಮ್ಮ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದು, ಮೊದಲು ಮಸೀದಿ ಮೇಲಿರುವ ಮೈಕ್‌ ತೆಗೆಸಿ, ಆಮೇಲೆ ನಮ್ಮ ಕಡೆ ಬನ್ನಿ ಎಂದು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಮುತಾಲಿಕ್ ಸವಾಲು ಹಾಕಿದ್ದಾರೆ. ಭಜನೆಯಲ್ಲಿ ಹಿಂದೂ ಸಂಘಟನೆ ಹಾಗೂ ಮಠಾಧೀಶರು ಭಾಗಿಯಾಲಿದ್ದಾರೆ. 

Related Video