ಬೇಡಿಕೆ ಈಡೇರಿಸಲು ಸರ್ಕಾರ ನಕಾರ; ಹೋರಾಟಕ್ಕಿಳಿದ ಆಶಾ ಕಾರ್ಯಕರ್ತೆಯರು

ವೈದ್ಯರಾಯ್ತು ಈಗ ಆಶಾ ಕಾರ್ಯಕರ್ತೆಯರ ಸರದಿ. ಜುಲೈ 10 ರಿಂದ ಆಶಾ ಕಾರ್ಯಕರ್ತೆಯರು ಗೌರವ ಧನವನ್ನು 12 ಸಾವಿರಕ್ಕೆ  ಹೆಚ್ಚಿಸಬೇಕೆಂದು ಹೋರಾಕ್ಕಿಳಿಯುತ್ತಿದ್ದಾರೆ. ಈಗ ನೀಡುತ್ತಿರುವ ಗೌರವ ಧನವನ್ನು ಸರಿಯಾಗಿ ನೀಡಬೇಕು. ಸುರಕ್ಷಿತ ಸಾಮಗ್ರಿಗಳನ್ನು ಮೊದಲು ಕೊಡಬೇಕು ಎಂದು ಆಗ್ರಹಿಸಿದ್ದಾರೆ. 

First Published Jul 7, 2020, 2:55 PM IST | Last Updated Jul 7, 2020, 2:55 PM IST

ಬೆಂಗಳೂರು (ಜು. 07): ವೈದ್ಯರಾಯ್ತು ಈಗ ಆಶಾ ಕಾರ್ಯಕರ್ತೆಯರ ಸರದಿ. ಜುಲೈ 10 ರಿಂದ ಆಶಾ ಕಾರ್ಯಕರ್ತೆಯರು ಗೌರವ ಧನವನ್ನು 12 ಸಾವಿರಕ್ಕೆ  ಹೆಚ್ಚಿಸಬೇಕೆಂದು ಹೋರಾಕ್ಕಿಳಿಯುತ್ತಿದ್ದಾರೆ. ಈಗ ನೀಡುತ್ತಿರುವ ಗೌರವ ಧನವನ್ನು ಸರಿಯಾಗಿ ನೀಡಬೇಕು. ಸುರಕ್ಷಿತ ಸಾಮಗ್ರಿಗಳನ್ನು ಮೊದಲು ಕೊಡಬೇಕು ಎಂದು ಆಗ್ರಹಿಸಿದ್ದಾರೆ. 

ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು; ಶಹಬ್ಭಾಸ್ ಶಾಸಕರೇ..!

ಈ ಹೋರಾಟ ನಿನ್ನೆ ಮೊನ್ನೆಯದಲ್ಲ. ಜನವರಿಯಿಂದಲೂ ವೇತನ ಹೆಚ್ಚಳ ಮಾಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಇದುವರೆಗೂ ಇವರ ಬೇಡಿಕೆಗೆ ಸ್ಪಂದಿಸಿರಲಿಲ್ಲ. ಈಗ ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಯೂ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ವೈದ್ಯಕೀಯ ಸಾಮಗ್ರಿ, ಹಾಗೂ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟಕ್ಕಿಳಿದಿದ್ದಾರೆ.