Karnataka Politics: ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಬಗ್ಗೆ ಮಹತ್ವದ ಸಭೆ

ರಾಜ್ಯ ಸರ್ಕಾರದ ಕೆಲ ನಿಗಮ-ಮಂಡಳಿಗಳಲ್ಲಿ ( Boards & Corporation ) ಖಾಲಿ ಇರುವ ಅಧ್ಯಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಬಿಜೆಪಿ ಕಚೇರಿಯಲ್ಲಿ ನಾಯಕರ ಮಹತ್ವದ ಸಭೆ ನಡೆದಿದೆ. ಸಚಿವ ಆರ್ ಅಶೋಕ್, ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭಾಗಿಯಾದರು.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 24): ರಾಜ್ಯ ಸರ್ಕಾರದ ಕೆಲ ನಿಗಮ-ಮಂಡಳಿಗಳಲ್ಲಿ ( Boards & Corporation ) ಖಾಲಿ ಇರುವ ಅಧ್ಯಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಬಿಜೆಪಿ ಕಚೇರಿಯಲ್ಲಿ ನಾಯಕರ ಮಹತ್ವದ ಸಭೆ ನಡೆದಿದೆ. ಸಚಿವ ಆರ್ ಅಶೋಕ್, ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭಾಗಿಯಾದರು. ಶೀಘ್ರದಲ್ಲೇ ನಿಗಮ ಮಂಡಳಿ ಪಟ್ಟಿ ಪ್ರಕಟ ಸಾಧ್ಯತೆ ಇದೆ. 

ರಾಜ್ಯ ಸರ್ಕಾರದ ಕೆಲ ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಅಧ್ಯಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಮುಂದಿನ ವಾರದಿಂದ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಈಗಿರುವ ನಿಗಮ-ಮಂಡಳಿಗಳ ಅಧ್ಯಕ್ಷರನ್ನು ಬದಲಾಯಿಸುವ ಪ್ರಸ್ತಾಪ ಕೈಬಿಟ್ಟಂತಾಗಿದೆ. ಎರಡು ವರ್ಷ ಪೂರೈಸಿರುವ ಹಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಅವರಲ್ಲಿ ಬಹುತೇಕರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಂಬಲಿಗರೇ ಆಗಿರುವುದರಿಂದ ಕೈಬಿಡುವುದು ಕಷ್ಟಎಂಬ ನಿಲವಿಗೆ ಬಿಜೆಪಿ ನಾಯಕರು ಬಂದಂತಿದೆ.

Related Video