Asianet Suvarna News Asianet Suvarna News

ಒತ್ತುವರಿ ತೆರವು, ಸಾಮಾನ್ಯರ ಮುಂದೆ ಅಬ್ಬರಿಸಿದ ಜೆಸಿಬಿ, ದೊಡ್ಡವರ ಮುಂದೆ ಸೈಲೆಂಟ್!

ಸಾಲ ಮಾಡಿ ಮನೆ ಕಟ್ಟಿದ ಜನಸಾಮಾನ್ಯರ ಮನೆಯನ್ನು ಕೆಡವಲಾಗುತ್ತಿದೆ. ಇದರ ಬದಲು ಲೇಔಟ್ ಮಾಡಿದವರು, ಇದಕ್ಕೆ ಅನುಮತಿ ಕೊಟ್ಟವರು, ಡೆವಲಪ್ಪರ್ ಹಣ ಮಾಡಿ ಹಾಯಾಗಿದ್ದಾರೆ. ಇದೀಗ ಸರ್ಕಾರ ಜನಸಾಮಾನ್ಯರ ಮೇಲೆ ಕ್ರಮ ಸೂಕ್ತವಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ರಾಜಕಾಲುವೆ ಒತ್ತುವರಿ, ಹಿಂದಿ ದಿವಸ್ ಆಚರಣೆ ಪ್ರತಿಭಟನೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

ಬೆಂಗಳೂರು ಮುಳುಗಡೆಗೆ ಕಾರಣವಾಗಿದ್ದ ರಾಜಕಾಲುವೇ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಎಸಗಲಾಗಿದೆ ಅನ್ನೋ ಆರೋಪ ಬಲವಾಗುತ್ತಿದೆ. ಸಾಮಾನ್ಯರ ಮನೆಯನ್ನು ನಿಮಿಷಗಳಲ್ಲೇ ಕೆಡವಿದ ಸರ್ಕಾರ, ಮೊಹಮ್ಮದ್ ನಲಪಾಡ್ ಅಕಾಡೆಮಿ ಕೌಪೌಂಡ್ ಮಾತ್ರ ಒಡೆಯಲು ಬುಲ್ಡೋಜರ್‌ಗೆ ಸಾಧ್ಯವಾಗುತ್ತಲೇ ಇಲ್ಲ. ರಾಜಕಾಲುವೇ ಒತ್ತುವರಿ ಮಾಡಿರುವ ಬಾಗಮನೆ ಟೆಕ್ ಪಾರ್ಕ್ ಹಾಗೂ ಪೂರ್ವಂಕಾರ ನಡುವೆ ಇದೀಗ ಹೊಸ ವಾದ ಮುಂದಿಟ್ಟಿದೆ. ನಮ್ಮ ಜಾಗದಲ್ಲಿ ರಾಜಕಾಲುವೇ ಇಲ್ಲ ಎಂದು ಪೂರ್ವಾಂಕರ ಹೇಳಿದರೆ, ನಾವು ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಬಾಗಮನೆ ಟೆಕ್ ಪಾರ್ಕ್ ಹೇಳಿದೆ. ದೊಡ್ಡವರಾದ ಕಾರಣ ಎರಡನೇ ಬಾರಿ ಸರ್ವೆ ಮಾಡಲಾಗಿದೆ. ಬಡವರಾಗಿದ್ದರೆ ಈಗಾಗಲೇ ಒಡೆದು ಧ್ವಂಸ ಮಾಡಲಾಗುತ್ತಿತ್ತು.

Video Top Stories