Asianet Suvarna News Asianet Suvarna News

ಬಿಜೆಪಿ-ಕಾಂಗ್ರೆಸ್‌ ನಡುವೆ ರೈಸ್‌ ರಾಜಕೀಯ, ಬಸ್‌ ಡೋರ್‌ ಕಿತ್ತು ಕಂಡಕ್ಟರ್‌ಗೆ ಕೊಟ್ಟ 'ಶಕ್ತಿ' ಮಹಿಳೆಯರು!

ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ರೈಸ್‌ ರಾಜಕೀಯ ಜೋರಾಗಿದೆ. ಈ ನಡುವೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ಜೋರಾಗಿದೆ. ಚಾಮರಾನಗರದಲ್ಲಿ ಸರ್ಕಾರಿ ಬಸ್‌ನ ಡೋರ್‌ಅನ್ನು ಕಿತ್ತು, ಕಂಡಕ್ಟರ್‌ ಕೈಗೆ ಕೊಟ್ಟಿದ್ದಾರೆ.

First Published Jun 17, 2023, 11:21 PM IST | Last Updated Jun 17, 2023, 11:21 PM IST

ಬೆಂಗಳೂರು (ಜೂ.17): ರಾಜ್ಯಾದ್ಯಂತ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಾದ ಶಕ್ತಿ ಜಾರಿಯಾದ ಬಳಿಕ ಇದು ಮೊದಲ ವೀಕೆಂಡ್‌. ನಿರೀಕ್ಷೆಯಂತೆ ಸರ್ಕಾರಿ ಬಸ್‌ಗಳಿಗೆ ಶಕ್ತಿ ಯೋಜನೆಯ ಎಫೆಕ್ಟ್‌ ತಟ್ಟಿದೆ. ರೈಲ್ವೆ ಪ್ರಯಾಣಿಕರಲ್ಲೂ ಶೇ.20ರಷ್ಟು ಇಳಿಮುಖವಾಗಿದೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಅತೀವ ಏರಿಕೆಯಾಗಿದೆ. ಈ ಮುನ್ನ ನಾಲ್ಕೂ ನಿಗಮಗಳಿಂದ ಪ್ರತಿದಿನ ಸರಾಸರಿ 75-80 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರೆ, ಯೋಜನೆ ಜಾರಿಯಾದ ಬಳಿಕ ಸರಾಸರಿ 1.16 ಕೋಟಿಗೆ ಏರಿಕೆಯಾಗಿದೆ. 

ಮಹಿಳೆಯರ 'ಶಕ್ತಿ'ಗೆ ಮುರಿದುಬಿದ್ದ ಬಸ್‌ ಡೋರ್‌: ಕಂಡಕ್ಟರ್‌ ಪರದಾಟ

ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಅಕ್ಕಿ ಪಾಲಿಟಿಕ್ಸ್‌ ಮುಂದಿನ ವಾರ ಇನ್ನೊಂದು ಹಂತಕ್ಕೇರಲಿದೆ. ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ 20ರಂದು ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಮಾಡಲಿದೆ. 

Video Top Stories