Asianet Suvarna News Asianet Suvarna News

ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನನ್ನ ಅಧಿಕಾರದಲ್ಲಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ ಈಗ 2 ಕೆಜಿಗೆ ಕಡಿತ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಆ. 16): ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನನ್ನ ಅಧಿಕಾರದಲ್ಲಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ ಈಗ 2 ಕೆಜಿಗೆ ಕಡಿತ ಮಾಡಿದ್ದಾರೆ. ಲಾಕ್‌ಡೌನ್ ಆದಾಗ ಬಿಎಸ್‌ವೈ ಗೆ ಜನರಿಗೆ 10 ಸಾವಿರ ರೂ ಹಣ ಕೊಡಿ. 10 ಕೆಜಿ ಅಕ್ಕಿ ಕೊಡಿ ಹೇಳಿದೆ. ಆದರೆ ಅವರು ಕೇಳಲಿಲ್ಲ' ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

'217 ಯೋಜನೆಗಳಿಗೆ ಒಂದೇ ಕುಟುಂಬದ ಹೆಸರಿಡಲು ಈ ದೇಶ ಒಂದೇ ಕುಟುಂಬದ ಆಸ್ತಿಯೇನ್ರಿ'?

ಯಡಿಯೂರಪ್ಪ ಹಾಗೂ ಅವರ ಮಗ ಲೂಟಿ ಹೊಡೆಯಲು ಹಣ ಇದೆ. ಬಡವರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಅವರಿಗೆ ಊಟ ಇಲ್ಲ, ಕೆಲಸ ಇಲ್ಲ, ಕೊಡಿ ಅಂದ್ರೆ ಇಲ್ಲ ಅಂತಾರೆ. ನಾವೇ ಅಧಿಕಾರದಲ್ಲಿದ್ರೆ ಪ್ರತಿಯೊಬ್ಬರಿಗೂ 10 ಸಾವಿರ ರೂ, 10 ಕೆಜಿ ಅಕ್ಕಿ ಕೊಡುತ್ತಿದ್ದೆ' ಎಂದು ಸಿದ್ದರಾಮಯ್ಯ ಹೇಳಿದರು.