ಹಿಜಾಬ್‌, ಹಲಾಲ್ ಆಯ್ತು, ಈಗ ಹೊಸ ಅಸ್ತ್ರ; ಮಸೀದಿ ಮೈಕ್‌ಗಳ ನಿಷೇಧಕ್ಕೆ ಒತ್ತಾಯ

ಹಿಜಾಬ್ ಆಯ್ತು, ಹಲಾಲ್ ಆಯ್ತು, ಈಗ ಇನ್ನೊಂದು ಅಭಿಯಾನ ಶುರುವಾಗಿದೆ. ಮಸೀದಿಗಳ (Mosques) ಮೇಲಿನ ಧ್ವನಿವರ್ಧಕಗಳಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಆಂದೋಲಾ ಶ್ರೀ ಆಗ್ರಹಿಸಿದ್ದಾರೆ. 

First Published Apr 4, 2022, 1:22 PM IST | Last Updated Apr 4, 2022, 1:25 PM IST

ಬೆಂಗಳೂರು (ಏ. 04): ಹಿಜಾಬ್ ಆಯ್ತು, ಹಲಾಲ್ ಆಯ್ತು, ಈಗ ಇನ್ನೊಂದು ಅಭಿಯಾನ ಶುರುವಾಗಿದೆ. ಮಸೀದಿಗಳ (Mosques) ಮೇಲಿನ ಧ್ವನಿವರ್ಧಕಗಳಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಆಂದೋಲಾ ಶ್ರೀ ಆಗ್ರಹಿಸಿದ್ದಾರೆ. 

JDS ರಾಜ್ಯಾಧ್ಯಕ್ಷ ಸ್ಥಾನ C.M ಇಬ್ರಾಹಿಂ ಹೆಗಲಿಗೆ.?

ರಾಜ್ಯದಲ್ಲಿನ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

‘ನಾನು ಪ್ರಾರ್ಥನೆ ವಿರೋಧಿಸುವುದಲ್ಲ. ನೀವು ನಿಮ್ಮ ಮನೆಯಲ್ಲಿ ಪ್ರಾರ್ಥಿಸಬಹುದು. ಆದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದನ್ನು ಮೈಕ್‌ನಲ್ಲಿ ಪ್ರಸಾರ ಮಾಡುವುದು ಸರಿಯಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಸೀದಿಯಿಂದ ಧ್ವನಿವರ್ಧಕ ತೆಗೆಸಬೇಕು. ಇಲ್ಲದೇ ಹೋದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು, ಮಸೀದಿಗಳ ಮುಂದೆ ಧ್ವನಿವರ್ಧಕಗಳಲ್ಲಿ ಮಸೀದಿ ಧ್ವನಿಗಿಂತ ಡಬ್ಬಲ್‌ ಜೋರಾಗಿ ಹನುಮಾನ್‌ ಚಾಲೀಸಾ ಪ್ರಸಾರ ಮಾಡಲಿದ್ದಾರೆ’ ಎಂದು ರಾಜ್‌ ಠಾಕ್ರೆ ಎಚ್ಚರಿಸಿದ್ದಾರೆ.
 

Video Top Stories