Asianet Suvarna News Asianet Suvarna News

ಅತ್ತ ಪ್ರಜ್ವಲ್ ಕಣ್ಣಾಮುಚ್ಚಾಲೆ ಆಟ, ಇತ್ತ ರಾಜಕೀಯ ಪಗಡೆಯಾಟ! ಡಿಕೆಶಿ Vs ದಳಪತಿ ಡಿಶುಂ ಡಿಶುಂ!

ಪ್ರಜ್ವಲ್ ರೇವಣ್ಣ ಪೆನ್'ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾದ್ರೆ, ಜೆಡಿಎಸ್'ಗೆ ಅದೇ ಶಾಪ. ಇದೇ ಪ್ರಕರಣ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಬಿಟ್ಟಿದೆ. 

ಬೆಂಗಳೂರು(ಮೇ.22):  ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಎಸ್ಕೇಪ್ ಆಗಿ 25 ದಿನ.. ಬೆನ್ನು ಬಿದ್ದ ಎಸ್ಐಟಿ, ಹಾಸನ ಸಂಸದನ ಕಣ್ಣಾಮುಚ್ಚಾಲೆ..! ಎಲ್ಲಿದ್ದರೂ ಬಾರಪ್ಪಾ ಎನ್ನುತ್ತಿದ್ದಾರೆ ಅಪ್ಪ-ಮಗ..! ಆಟವಾಡಿಸುತ್ತಿರುವ ಪ್ರಜ್ವಲ್'ಗೆ ರಾಜತಾಂತ್ರಿಕ ಪಾಸ್'ಪೋರ್ಟೇ ಶ್ರೀರಕ್ಷೆ.. ಪ್ರಜ್ವಲ್ ಪಾಸ್’ಪೋರ್ಟ್ ರದ್ದು ಮಾಡಲು ಮೋದಿಗೆ ಸಿದ್ದರಾಮಯ್ಯ ಪತ್ರ..! ಜಾರಿಯಾಗಿದೆ ಅರೆಸ್ಟ್ ವಾರಂಟ್, ವಾಪಸ್ ಬರ್ತಾನಾ ಹಾಸನದ ಪೆನ್'ಡ್ರೈವ್ ವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಾರಪ್ಪಾ ಪ್ರಜ್ವಲ್..!

ಪ್ರಜ್ವಲ್ ರೇವಣ್ಣ ಪೆನ್'ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾದ್ರೆ, ಜೆಡಿಎಸ್'ಗೆ ಅದೇ ಶಾಪ. ಇದೇ ಪ್ರಕರಣ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಬಿಟ್ಟಿದೆ. 

ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಸಿಬಿಐ ಹೆಗಲಿಗೆ ಬೀಳುತ್ತಾ? ಹೈಕೋರ್ಟ್‌ ಮೊರೆ ಹೋಗಲು ಹೆಚ್‌ಡಿಕೆ ಚಿಂತನೆ?

ಪ್ರಜ್ವಲ್ ರೇವಣ್ಣ ಯಾವಾಗ ವಾಪಸ್ ಬರ್ತಾರೆ ಅನ್ನೋ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಪೆನ್'ಡ್ರೈವ್ ವೀರನ ಕಣ್ಣಾಮುಚ್ಚಾಲೆ ಆಟ ನೋಡಿ ಸುಸ್ತಾದ ದಳಪತಿಗಳೇ ಈಗ ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ. ಮತ್ತೊಂದ್ಕಡೆ, ಪ್ರಜ್ವಲ್ ಪೆನ್'ಡ್ರೈವ್ ಪ್ರಕರಣದಲ್ಲಿ ಮತ್ತೆ ರಾಜಕೀಯ ಪಗಡೆಯಾಟ ಶುರುವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೊಡ್ಡ ಜಟಾಪಟಿಯೇ ನಡೆದು ಬಿಟ್ಟಿದೆ.

ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ ಕುಮಾರಸ್ವಾಮಿ. ಜಪ್ಪಯ್ಯ ಅಂದ್ರೂ ವಾಪಸ್ ಬರ್ತಿಲ್ಲ ಪೆನ್'ಡ್ರೈವ್ ವೀರ. ಈ ಮಧ್ಯೆ ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್"ಗೆ ಮತ್ತೊಂದು ಶಾಕ್ ಕೊಡಲು ಎಸ್ಐಟಿ ಮಾಸ್ಟರ್ ಪ್ಲಾನ್ ಮಾಡ್ತಾ ಇದೆ. ಅಷ್ಟಕ್ಕೂ ಏನದು ಶಾಕ್..? 

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆ ಕುಟುಂಬಕ್ಕೂ ಮುಜುಗರ, ಪಕ್ಷಕ್ಕೂ ಮುಜುಗರ. ಹೀಗಾಗಿ ಎಲ್ಲಿದ್ರೂ ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ ಕುಮಾರಸ್ವಾಮಿ. ಆದ್ರೆ ಫಾರಿನ್'ನಲ್ಲೇ ಸೆಟ್ಲಾಗಿರೋ ಪೆನ್'ಡ್ರೈವ್ ವೀರ ಮಾತ್ರ ಜಪ್ಪಯ್ಯ ಅಂದ್ರೂ ವಾಪಸ್ ಬರ್ತಿಲ್ಲ . ಈ ಮಧ್ಯೆ ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್"ಗೆ ಮತ್ತೊಂದು ಶಾಕ್ ಕೊಡಲು ಎಸ್ಐಟಿ ಮಾಸ್ಟರ್ ಪ್ಲಾನ್ ಮಾಡ್ತಾ ಇದೆ.