ಅಮರನಾಥದಲ್ಲಿ ಸಿಲುಕಿರುವ ನೂರು ಕನ್ನಡಿಗರೂ ಸೇಫ್: ಸಿಎಂ ಬೊಮ್ಮಾಯಿ
ಅಮರನಾಥದಲ್ಲಿ ಮೇಘಸ್ಪೋಟದಲ್ಲಿ ನೂರು ಕನ್ನಡಿಗರು ಸಿಲುಕಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿ ರಕ್ಷಣಾ ಕಾರ್ಯದ ವಿಚಾರವಾಗಿ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು (ಜುಲೈ 9): ಅಮರನಾಥದ (Amarnath) ಗುಹೆಯ (Holy Cave) ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಭಾರೀ ಮೇಘಸ್ಫೋಟದಲ್ಲಿ (Cloudburst) ಈವರೆಗೂ 16 ಮಂದಿ ಸಾವನ್ನಪ್ಪಿದ್ದಾರೆ. ಈ ವೇಳೆ ರಾಜ್ಯದ ಜನರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನೂ ಆರಂಭಿಸಿದೆ.
ಒಟ್ಟು 100 ಮಂದಿ ಕನ್ನಡಿಗರು ಅಮರನಾಥದಲ್ಲಿದ್ದು ಇವರೆಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj bommai) ತಿಳಿಸಿದ್ದಾರೆ. ರಾಜ್ಯದ ಜನರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಕೇಂದ್ರದ ಜೊತೆ ಮುಖ್ಯ ಕಾರ್ಯದರ್ಶಿ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ಸೇಫ್ ಇದ್ದೇವೆ, ಆರ್ಮಿಯವರು ಚೆನ್ನಾಗಿ ನೋಡಿಕೊಂಡರು: ಶಿವಮೊಗ್ಗದ ಮಹಿಳಾ ತಂಡ
ಮೈಸೂರು, ಶಿವಮೊಗ್ಗ ಹಾಗೂ ಬೀದರದ ಯಾತ್ರಾರ್ಥಿಗಳು ಸೇಫ್ ಅಗಿರುವ ಬಗ್ಗೆ ಶುಕ್ರವಾರವೇ ಮಾಹಿತಿ ಸಿಕ್ಕಿತ್ತು. ಸರ್ಕಾರ ನೀಡಿರುವ ಹೆಲ್ಪ್‌ಲೈನ್‌ಗೆ ಈಗಾಗಲೇ 15 ರಿಂದ 20 ಮಂದಿ ಕರೆ ಮಾಡಿ ತಾವಿರುವ ಸ್ಥಳವನ್ನು ತಿಳಿಸಿದ್ದು ಅವರ ರಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.