Asianet Suvarna News Asianet Suvarna News

ಪೊಲೀಸರ ಮೇಲೆ ಅನುಮಾನ: HDKಯನ್ನು ಭೇಟಿಯಾದ ಮಂಗಳೂರು ಕಮಿಷನರ್

Jan 21, 2020, 10:02 PM IST

ಮಂಗಳೂರು, [ಜ.21]: ಮಂಗಳೂರಲ್ಲಿ ಬಾಂಬ್ ಪತ್ತೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಇವರ ಹೇಳಿಕೆಗಳಿಗೆ ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಕುಮಾರಸ್ವಾಮಿ ಅವರು ಪದೇ-ಪದೇ ಪೊಲೀಸರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

 'ಮಂಗಳೂರು ಬಾಂಬ್‌ ಘಟನೆ ಒಂದು ಅಣಕು ಪ್ರದರ್ಶನ!'

ಇತ್ತೀಚೆಗೆ ಮಂಗಳೂರು ಗೋಲಿಬಾರ್ ನಡೆದಾಗ ಕುಮಾರಸ್ವಾಮಿ ಕಮಿಷನರ್  ಡಾ.ಪಿ.ಎಸ್ ಹರ್ಷ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದರು. ಆದ್ರೆ, ಇದೀಗ ಬಾಂಬ್ ಪತ್ತೆಯಲ್ಲೂ ಪೊಲೀಸರ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಅವರು ಕಾದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ.