ಹಾರ್ಟ್ ಅಟ್ಯಾಕ್ ಸಾವಿನ ಪ್ರಮಾಣ ತಗ್ಗಿಸಲು ಹೊಸ ಯೋಜನೆ : ಏನಿದು AED ಟ್ರೀಟ್ಮೆಂಟ್..?
ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ಹೆಚ್ಚಾಗಿ ಚಿಕ್ಕವಯಸ್ಸಿನವರೇ ಮೃತರಾಗುತ್ತಿದ್ದು, ದುರ್ದೈವದ ಸಂಗತಿ. ಇದೀಗ ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣ ತಗ್ಗಿಸಲು ಸರ್ಕಾರ ಹೊಸ ಯೋಜನೆ ಜಾರಿಗೆ ಮುಂದಾಗಿದೆ.
ವಯಸ್ಸಲ್ಲದ ವಯಸ್ಸಲ್ಲಿ ಪುನೀತ್ ನಿಧನ... ಚಿಕ್ಕ ವಯಸ್ಸಲ್ಲೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ.. ಖುಷಿ ಖುಷಿಯಾಗಿದ್ದ ಸ್ಪಂದನಾ ದಿಢೀರ್ ಸಾವು... ಒಂದಲ್ಲ ಎಡರಲ್ಲ.. ಚಿಕ್ಕ ವಯಸ್ಸಲ್ಲೇ ಜೀವ ಬಿಟ್ಟ ಇಂಥ ಶಾಕಿಂಗ್ ಘಟನೆಗಳು ಸಾಕಷ್ಟಿವೆ. ಇವರೆಲ್ಲರ ಸಾವಿಗೆ ಕಾರಣವಾಗಿದ್ದು ಹಾರ್ಟ್ ಅಟ್ಯಾಕ್.. ನೋಡ ನೋಡತ್ತಲೇ ಹಾರ್ಟ್ ಅಟ್ಯಾಕ್ನಿಂದ(Heart Attack) ಜೀವ ಬಿಟ್ಟ ದೃಶ್ಯಗಳನ್ನ ನೋಡುತ್ತಲೇ ಇದ್ದೇವೆ. ಅದರಲ್ಲೂ ಈ ಹಾರ್ಟ್ ಅಟ್ಯಾಕ್ನಿಂದ ಸಾವಿನ ಪ್ರಕರಣ ಇತ್ತೀಚೆಗೆ ದೊಡ್ಡ ಸಂಖ್ಯೆಯಲ್ಲೆ ವರದಿಯಾಗುತ್ತಿವೆ. ಇದೀಗ ರಾಜ್ಯ ಸರ್ಕಾರ ಹಾರ್ಟ್ ಅಟ್ಯಾಕ್ ಸಾವಿನ ಪ್ರಮಾಣ ತಗ್ಗಿಸಲು ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಪುನೀತ್ ರಾಜ್ಕುಮಾರ್(Puneeth Rajkumar) ಹೆಸರಲ್ಲಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. 2023-24 ಸಾಲಿನ ಬಜೆಟ್ನಲ್ಲೆ ಸಿಎಂ ಸಿದ್ದರಾಮಯ್ಯ(Siddaramaiah) ಈ ಯೋಜನೆ ಘೋಷಣೆ ಮಾಡಿದ್ದರು. ಎಲ್ಲ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 6 ಕೋಟಿ ವೆಚ್ಚದಲ್ಲಿ AED ಯೋಜನೆ ಜಾರಿ ಭರವಸೆ ನೀಡಿದ್ದರು. ಇದೀಗ ಈ ಯೋಜನೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ.
ಇದನ್ನೂ ವೀಕ್ಷಿಸಿ: ರಾಜ್ಯಾದ್ಯಂತ ನಾಗರಪಂಚಮಿ ಸಗಡರ: ಈ ಹಬ್ಬದ ಮಹತ್ವ ಏನು ಗೊತ್ತಾ?