Asianet Suvarna News Asianet Suvarna News

ಯುವರಾಜ್‌ ಹೇಳಿದ್ದ ಭವಿಷ್ಯವು ಸಾಕಷ್ಟು ಬಾರಿ ಸತ್ಯವಾಗಿದೆಯಂತೆ! ಇಲ್ಲೆ ಎಡವಟ್ಟು ಮಾಡ್ಕೊಂಡ್ರಾ ರಾಧಿಕಾ..?

ಸಿನಿಮಾ, ನಟನೆ , ನಿರ್ಮಾಣ ಅಂದುಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಈಗ ನಯ ವಂಚಕ ಯುವರಾಜ್ ಜೊತೆ ಹನದ ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. 

First Published Jan 9, 2021, 3:25 PM IST | Last Updated Jan 9, 2021, 3:25 PM IST

ಬೆಂಗಳೂರು (ಜ. 09): ಸಿನಿಮಾ, ನಟನೆ , ನಿರ್ಮಾಣ ಅಂದುಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಈಗ ನಯ ವಂಚಕ ಯುವರಾಜ್ ಜೊತೆ ಹನದ ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಸಿನಿಮಾ ನಿರ್ಮಾಣಕೆಂದು 75 ಲಕ್ಷ ರೂ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರ ಸಹೋದರ ರವಿರಾಜ್ 1 ಕೋಟಿ ನಗದು ಪಡೆದಿರುವುದಾಗಿ ಬಾಯ್ಬಿಟ್ಟಿದ್ದು, ರಾಧಿಕಾಗೆ ಇನ್ನಷ್ಟು ಮುಳುವಾಗಿದೆ.  

‘ನಮ್ಮ ಕುಟುಂಬಕ್ಕೆ ಹದಿನೇಳು ವರ್ಷಗಳಿಂದ ಯುವರಾಜ್‌ ಫ್ಯಾಮಿಲಿ ಫ್ರೆಂಡ್‌ ಆಗಿದ್ದರು. ಜ್ಯೋತಿಷ್ಯ ಸಹ ಹೇಳುತ್ತಿದ್ದರಿಂದ ಅವರ ಮೇಲೆ ಹೆಚ್ಚಿನ ವಿಶ್ವಾಸವಿತ್ತು. ಯುವರಾಜ್‌ ಹೇಳಿದ್ದ ಭವಿಷ್ಯವು ಸಾಕಷ್ಟು ಬಾರಿ ಸತ್ಯವಾಗಿದೆ. ಹೀಗಾಗಿ ಅವರೊಂದಿಗೆ ಆತ್ಮೀಯ ಒಡನಾಟವಿತ್ತು. ಆದರೆ ಅವರ ವಂಚನೆ ಕೃತ್ಯಗಳಿಗೆ ಸಹಕರಿಸಿಲ್ಲ. ಚಲನಚಿತ್ರ ನಿರ್ಮಾಣ ಸಲುವಾಗಿ ನನಗೆ .75 ಲಕ್ಷ ಮುಂಗಡ ಹಣ ಕೊಟ್ಟಿದ್ದರು’ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದ್ರೆ ಏನದು ಭವಿಷ್ಯ..? 

Video Top Stories