Asianet Suvarna News Asianet Suvarna News

ದರ್ಶನ್ ಅಭಿಮಾನಿಗಳ ಜೊತೆ ವಿವಾದ: ಸಮರ್ಥನೆ ಕೊಟ್ಟ ಜಗ್ಗೇಶ್

ದರ್ಶನ್ ಅಭಿಮಾನಿಗಳ ವಿರುದ್ಧ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ. ದರ್ಶನ್ ಅಭಿಮಾನಿಗಳ ಜೊತೆ ನಡೆದ ಮಾತುಕತೆ ಕುರಿತು ಪ್ರತಿಕ್ರಿಯಿಸಿದ್ದಾರೆ. 

Feb 23, 2021, 2:35 PM IST

ಬೆಂಗಳೂರು (ಫೆ. 23): ದರ್ಶನ್ ಅಭಿಮಾನಿಗಳ ವಿರುದ್ಧ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ. 'ಯಾವ ನಟ, ಅವನ ಅಭಿಮಾನಿಗಳು ನನಗೆ ಬುದ್ದಿ ಹೇಳಬೇಕಾಗಿಲ್ಲ, ನಾನು ಇಂಡಸ್ಟ್ರಿಗೆ ಬಂದಾಗ ಇವರ್ಯಾರು ಹುಟ್ಟಿರಲಿಲ್ಲ. ನನಗೂ ಅಭಿಮಾನಿಗಳಿದ್ದಾರೆ. ನನಗೂ ಅಭಿಮಾನಿಗಳ ಸಂಘ ಇದೆ. ನನ್ನ ಬಗ್ಗೆ ಈ ರೀತಿ ಅಪಪ್ರಚಾರ ಮಾಡೋದು ಸರಿಯಲ್ಲ. ಕನ್ನಡಕ್ಕಾಗಿ, ಕನ್ನಡ ನೆಲಕ್ಕಾಗಿ ಒಂದಷ್ಟು ಕೆಲಸ ಮಾಡುವ ಮನಸ್ಸಿದೆ. ನನ್ನ ಹೆಸರಿಗೆ ಮಸಿ ಬಳಿಯಬೇಡಿ' ಎಂದಿದ್ದಾರೆ. ಜಗ್ಗೇಶ್ ಮಾತುಗಳನ್ನು ಅವರ ಬಾಯಲ್ಲೇ ಕೇಳಿ. 

ವೈರಲ್ ಆಡಿಯೋ.. ಮಾತಾಡಿದ್ದು ಯಾರು? ಜಗ್ಗೇಶ್ ಕೊಟ್ಟ ಸ್ಪಷ್ಟನೆ