'ಸರ್ಕಾರ ಕಾರ್ಪೋರೇಟ್ ಜಗತ್ತಿಗೆ, ಇಂಗ್ಲೀಷ್ ಮಾತಾಡೊರಿಗೆ ಮಾರಾಟ ಆಗೋದನ್ನ ಖಂಡಿಸ್ತೇವೆ'
ಕರ್ನಾಟಕ ಬಂದ್‌ಗೆ ನಟ ಚೇತನ್ ಸಾಥ್ ನೀಡಿದ್ದಾರೆ. ಸರ್ಕಾರ ತರಲು ಹೊರಟಿರುವ ಮಸೂದೆಗಳು ರೈತ ವಿರೋಧಿ ಮಸೂದೆಗಳು. ತರುವ ಮುನ್ನ ರೈತರ ಜೊತೆ ಚರ್ಚೆ ನಡೆಸಿಲ್ಲ. ಎಪಿಎಂಸಿಯನ್ನು ಸುಧಾರಣೆ ಮಾಡಬೇಕು. ಬೆಂಬಲ ಬೆಲೆ ಹೆಚ್ಚಿಸಬೇಕು ಎಂದಿದ್ದಾರೆ.
ಬೆಂಗಳೂರು (ಸೆ. 28): ಕರ್ನಾಟಕ ಬಂದ್‌ಗೆ ನಟ ಚೇತನ್ ಸಾಥ್ ನೀಡಿದ್ದಾರೆ. 'ಸರ್ಕಾರ ತರಲು ಹೊರಟಿರುವ ಮಸೂದೆಗಳು ರೈತ ವಿರೋಧಿ ಮಸೂದೆಗಳು. ತರುವ ಮುನ್ನ ರೈತರ ಜೊತೆ ಚರ್ಚೆ ನಡೆಸಿಲ್ಲ. ಎಪಿಎಂಸಿಯನ್ನು ಸುಧಾರಣೆ ಮಾಡಬೇಕು. ಬೆಂಬಲ ಬೆಲೆ ಹೆಚ್ಚಿಸಬೇಕು. ಅದನ್ನು ಬಿಟ್ಟು ಕಾರ್ಪೋರೇಟ್ ಜಗತ್ತಿಗೆ, ಇಂಗ್ಲೀಷ್ ಮಾತಾಡುವವರಿಗೆ ಮಾರಾಟ ಮಾಡುವುದನ್ನು ನಾವು ಖಂಡಿಸುತ್ತೇವೆ. ರೈತರ ಪರವಾಗಿ ನಿಲ್ಲಬೇಕಾದ ಸರ್ಕಾರ, ಆ ಕೆಲಸ ಮಾಡುತ್ತಿಲ್ಲ. ರೈತರನ್ನು ಬಳಸಿಕೊಂಡು ದುಡ್ಡು ಮಾಡಲು ಹೊರಟಿವೆ. ನಿಜವಾಗಿಯೂ ಇದು ರೈತರ ಮೇಲೆ ಚಪ್ಪಡಿ ಎಳೆಯುವ ಮಸೂದೆ' ಎಂದು ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಮೋದಿಯವರೇ, ಸಿಎಂ ಸಾಹೇಬ್ರೇ ಮತ್ತೊಮ್ಮೆ ಪರಿಶೀಲಿಸಿ, ಇಲ್ದಿದ್ರೆ ರೈತ ಸಂಘರ್ಷ ಎದುರಿಸಿ'