Belagavi: MES ಪುಂಡರ ಮೇಲೆ ದೇಶದ್ರೋಹದ ಕೇಸ್ ಇಲ್ಲ, ಒತ್ತಡಕ್ಕೆ ಮಣಿಯಿತಾ ಸರ್ಕಾರ?

ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಧ್ವಜ ಸುಟ್ಟು ಅವಮಾನ ಮಾಡಿ ಗಲಾಟೆ ಎಬ್ಬಿಸಿದ್ದ ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಮಾಮೂಲಿ ಕೇಸ್ ಹಾಕಿ ಕೈತೊಳೆದುಕೊಂಡಿದೆ. ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 

First Published Mar 18, 2022, 11:55 AM IST | Last Updated Mar 18, 2022, 11:55 AM IST

ಬೆಳಗಾವಿ (ಮಾ. 18): ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಧ್ವಜ ಸುಟ್ಟು ಅವಮಾನ ಮಾಡಿ ಗಲಾಟೆ ಎಬ್ಬಿಸಿದ್ದ ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಮಾಮೂಲಿ ಕೇಸ್ ಹಾಕಿ ಕೈತೊಳೆದುಕೊಂಡಿದೆ. ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 

ಬೆಳಗಾವಿ ಗಲಭೆ ಸಂದರ್ಭದಲ್ಲಿ ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹದ ಕೇಸ್ ಹಾಕುವುದಾಗಿ ಸರ್ಕಾರ ಹೇಳಿತ್ತು. ಅದರೆ ಇದೀಗ ದೇಶದ್ರೋಹದ ಕೇಸ್ ಕೈ ಬಿಟ್ಟಿದೆ. ಒತ್ತಡಕ್ಕೆ ಮಣಿಯಿತಾ ಸರ್ಕಾರ.? ಎಂಬ ಪ್ರಶ್ನೆ ಎದ್ದಿದೆ.